Header Ads
Header Ads
Breaking News

ಚಾಲಕನಿಲ್ಲದೆ ಚಲಿಸಿದ ಜೀಪು ಬಾಲಕನಿಗೆ ಢಿಕ್ಕಿ

ಚಾಲಕನಿಲ್ಲದೆ ಚಲಿಸಿದ ಜೀಪು ಬಾಲಕನಿಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ. ಜೂನ್3 ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಜೀಪನ್ನು ನಿಲ್ಲಿಸಿದ್ದ ಜಾಗ ಎರು ಪ್ರದೇಶವಾಗಿದ್ದ, ಜೀಪು ಹೇಗೆ ಮುಂದೆ ಸಾಗಿದೆ ಎನ್ನುವುದು ಮಾತ್ರ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ವಿಜಯಾ ಶಾಮಿಯಾನ ಎಂಬ ಅಂಗಡಿಗೆ ಸೇರಿದ ಈ ಜೀಪನ್ನು ಪ್ರತಿದಿನವೂ ಇದೇ ಸ್ಥಳದಲ್ಲಿ ನಿಲ್ಲಿಸಲಾಗುತ್ತಿತ್ತು. ಆದರೆ ಜೂನ್3 ರಂದು ಜೀಪು ಏರು ರಸ್ತೆಯಲ್ಲಿ ಸಾಗಿರುವುದು ಎಲ್ಲರ ಗೊಂದಲಕ್ಕೂ ಕಾರಣವಾಗಿದೆ. ಇಳಿಜಾರಿನ ಪ್ರದೇಶದಲ್ಲಿ ಅಥವಾ ಸಮತಟ್ಟಾದ ಪ್ರದೇಶದಲ್ಲಿ ವಾಹನಗಳು ಚಲಿಸೋದು ಸಾಮಾನ್ಯವಾದರೂ, ಇಲ್ಲಿ ಮಾತ್ರ ಜೀಪು ಏರು ರಸ್ತೆಯಲ್ಲಿ ಸಾಗುವ ಮೂಲಕ ಆತಂಕ ಸೃಷ್ಟಿಸಿತ್ತು. ಜೀಪು ಡಿಕ್ಕಿಯಾದ ಬಾಲಕ ಯಾವುದೇ ಗಾಯಗಳಾಗದೆ ಪಾರಾಗಿದ್ದಾನೆ.

 

Related posts

Leave a Reply