Header Ads
Header Ads
Header Ads
Breaking News

ಚಿಕಿತ್ಸೆ ಸಿಗದೆ ಮೃತಪಟ್ಟ ಪೂಜಾಳ ಕುಟುಂಬಕ್ಕೆ ಧನಸಹಾಯ ಪುತ್ತೂರಿನಲ್ಲಿ ಸಾರ್ವಜನಿಕ ಹಿತರಕ್ಷಣಾ ವೇದಿಕೆಯಿಂದ ಜಾಥಾ

ಚಿಕಿತ್ಸೆ ಸಿಗದೆ ಮೃತಪಟ್ಟ ಕುಮಾರಿ ಪೂಜಾಳ ಕುಟುಂಬಕ್ಕೆ ಧನಸಹಾಯ ನೀಡುವ ಸಲುವಾಗಿ ಸಾರ್ವಜನಿಕ ಹಿತರಕ್ಷಣ ವೇದಿಕೆ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಧನಸಹಾಯ ಸಂಗ್ರದ ಜಾಥ ದರ್ಬೆಯಲ್ಲಿ ನಡೆಯಿತು.

ಹಿಂದೂ ಸಂಘಟನೆ ಮುಖಂಡ ಡಾ.ಪ್ರಸಾದ್ ಭಂಡಾರಿ ಉದ್ಘಾಟಿಸಿದರು. ಸಿದ್ದರಾಮಯ್ಯನ ಸರಕಾರದ ದಂಧ್ವ ನೀತಿಯಿಂದ ವೈದ್ಯರುಗಳು ಪ್ರತಿಭಟನೆ ಕೈಗೊಂಡಿದ್ದರಿಂದ ಕುಮಾರಿ ಪೂಜಾ ಮೃತಳಾದಳು. ಆ ಬಡ ಕುಟುಂಬಕ್ಕೆ ಸಮಾಜವೇ ಮುಂದೆ ನಿಂತು ಧನಸಹಾಯ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಈ ಧನಸಂಗ್ರಹ ಜಾಥಕ್ಕೆ ಎಲ್ಲರು ಬೆಂಬಲಿಸಿ ಮತ್ತು ರಾಜ್ಯ ಸರಕಾರ ಕುಮಾರಿ ಪೂಜಾ ಸಹಿತ ಆ ಸಮಯದಲ್ಲಿ ಚಿಕಿತ್ಸೆ ಸಿಗದೇ ಸತ್ತ ಎಲ್ಲರಿಗೂ ರೂ.10 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು.

ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ತಾ.ಪಂ ಸದಸ್ಯ ಲಕ್ಷಣ ಗೌಡ ಬೆಳ್ಳಿಪ್ಪಾಡಿ, ನಗರಸಭಾ ಸದಸ್ಯ ರಾಜೇಶ್ ಬನ್ನೂರು, ಸುಜೀಂದ್ರ ಪ್ರಭು,ರಮೇಶ್, ವಿಶ್ವಕರ್ಮ ಸಮಾಜ ಸಭಾ ಬೀರಮಲೆ ಅದ್ಯಕ್ಷ ಗೋಪಾಲಕೃಷ್ಣ ಆಚಾರ್ಯ ಮತ್ತಿತ್ತರರು ಜಾಥದಲ್ಲಿ ಭಾಗವಹಿಸಿದ್ದರು.

Related posts

Leave a Reply