Header Ads
Breaking News

ಚಿಕ್ಕಬಳ್ಳಾಪುರದ ಭಕ್ತರ ವಿಶೇಷ ಸೇವೆ. ಐದು ಲಕ್ಷ ವ್ಯಯಿಸಿ ಹೂವಿನ ಅಲಂಕಾರ. ದೇವಾಲಯಕ್ಕೆ ಬಂದವರಿಗೆ ಘಮಘಮ ಸ್ವಾಗತ.

ಭಕ್ತಿಯನಿವೇಧನೆಗೆ ದೇವರಿಗೆ ಹೂವನ್ನರ್ಪಿಸಿವುದುಸಂಪ್ರದಾಯ, ಒಂದುಎಸಳಾದರೂ ಹೂವಿಟ್ಟು ಪೂಜೆ ಮಾಡಿದರೆ ದೇವರಿಗೆ ಸಂಪ್ರೀತಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಉಡುಪಿಯ ಅಂಬಲಪಾಡಿ ದೇವಸ್ಥಾನದಲ್ಲಿ ಒಂದು ವಿಶಿಷ್ಟ ಹೂವಿನ ಸೇವೆ ನಡೆಯುತ್ತೆ.ದೂರದ ಚಿಕ್ಕಬೆಳ್ಳಾಪುರದ ಹೂವಿನ ಕಂಪು, ಉಡುಪಿಯ ಅಂಬಲಪಾಡಿಯಲ್ಲಿ ಪಸರಿಸುವ ಒಂದು ಅಪರೂಪದ ಪೂಜೆ ಇದು.ದೇವಸ್ಥಾನವೇ ಉದ್ಯಾನವನದಂತಾಗಿರುವ ಈ ಮನೋಹರ ದೃಶ್ಯನೋಡಿ. ಕಣ್ಣು ಹಾಯಿಸಿದಲ್ಲೆಲ್ಲಾ ಹೂವಿನರಂಗವಲ್ಲಿ ಇಟ್ಟಂತೆ ಕಾಣುತ್ತಿದೆ ಅಲ್ವಾ …ಉಡುಪಿಯಲ್ಲಿ ಪ್ರಸಿದ್ದವಾಗಿರುವ ಅಂಬಲಪಾಡಿಯ ಜನಾರ್ಧನ ಮಹಾಕಾಳಿ ದೇವಸ್ಥಾನ ಇಂದು ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿತ್ತು. ದೇವರವಿಗ್ರಹಮಾತ್ರವಲ್ಲ, ಗುಡಿಗೋಪುರ, ಗೋಡೆ ಒಂದಿಂಚೂ ಬಿಡದೆ ಹೂವಿನ ಅಲಂಕಾರ ಮಾಡಲಾಗಿತ್ತು. ಇದುಭಕ್ತರೊಬ್ಬರು ವರ್ಷಕ್ಕೊಮ್ಮೆನಡೆಸುತ್ತಿರುವವಿಶಿಷ್ಟಸೇವೆ.

ಹೌದುಚಿಕಬೆಳ್ಳಾಪುರದ ಭಕ್ತವೃಂದದವರು ಅಂಬಲಪಾಡಿಯ ಮಹಾಕಾಳಿಯ ಮಹಾಭಕ್ತರು. ಅದಕ್ಕಂತಲೇ ವರ್ಷಕ್ಕೊಮ್ಮೆ ಕರಾವಳಿಗೆ ಬಂದು, ಹಗಲುರಾತ್ರಿ ಕುಳಿತು ಕೈಯ್ಯಾರೆ ದೇವಾಲಯವನ್ನು ಈ ರೀತಿ ಅಲಂಕರಿಸುತ್ತಾರೆ.ಚಿಕಬೆಳ್ಳಾಪುರದಿಂದ ಸುಮಾರು ಇನ್ನೂರು ಮಂದಿಭಕ್ತರು ಇದಕ್ಕಂತಲೇ ಬರ್ತಾರೆ, ಆಷಾಡ ಮಾಸದ ಕೊನೆಯ ಶುಕ್ರವಾರ ಇಲ್ಲಿಗೆ ಬರೋದನ್ನ ಇವರು ತಪ್ಪಿಸೋಲ್ಲ. ಒಂದು ಬಸ್ಸಿನ ತುಂಬಾ ಹೂವು ತುಂಬಿಸಿಕೊಂಡು ಬಂದು 24ತಾಸು ಕುಳಿತು ಭಕ್ತಿಮತ್ತುಶೃದ್ಧೆಯಿಂದ ಈ ಕೆಲಸಮಾಡ್ತಾರೆ.ಬಗೆಬಗೆಯ ಹೂವುಗಳ ತೋರಣ ಈ ಬಾರಿಯವಿಶೇಷ. ಸುಮಾರು ಐದು ಲಕ್ಷರುಪಾಯಿ ವೆಚ್ಚದಲ್ಲಿ ಅಲಂಕಾರ ಮಾಡಲಾಗಿತ್ತು.ಮಹಾಕಾಳಿಯ ಸನ್ನಿಧಾನಕ್ಕೆ ಬಂದ ನಂತರ ನಮ್ಮ ಸಂಕಷ್ಟಗಳೆಲ್ಲಾ ದೂರವಾಯ್ತು. ಹಾಗಂತಲೇ ವರ್ಷಂಪ್ರತಿ ಇಲ್ಲಿಗೆ ಬಂದು ದೇವರ ಸೇವೆಮಾಡ್ತೇವೆ ಅನ್ನೋದು ಚಿಕ್ಕಬೆಳ್ಳಾಪುರದ ಭಕ್ತರ ಅಭಿಮತ. ಇನ್ನು ಪ್ರತೀ ವಾರ ಬರುವ ಭಕ್ತರಿಗಂತೂ ಈ ಹೂವಿನ ಅಲಂಕಾರ ವಿಶೇಷ ಆಕರ್ಷಣೆಗೆ ಕಾರಣವಾಗುತ್ತದೆ.ಭಕ್ತಿಯನ್ನು ಇಮ್ಮಡಿಗೊಳಿಸುತ್ತದೆ.ಅಂಬಲಪಾಡಿ ಮಹಾಕಾಳಿಯ ಕೃಪೆಯಿಂದ ಚಿಕ್ಕಬೆಳ್ಳಾಪುರದ್ಲಲೂ ಒಂದು ದೇವಾಲಯ ಮಾಡಿದ್ದಾರೆ.ವರ್ಷದಿಂದ ವರ್ಷಕ್ಕೆ ಚಿಕ್ಕಬೆಳ್ಳಾಪುರದಿಂದ ಬರುವ ಭಕ್ತರ ಸಂಖ್ಯೆ ಹೆಚ್ತಾಇದೆ.ತಮ್ಮಉಸಿರು ಇರೋವರೆಗೂ ಅಂಬಲಪಾಡಿ ಅಮ್ಮನ ಸೇವೆ ಮಾಡ್ತೇವೆ ಅನ್ನೋದು ಇವರ ಭರವಸೆ.

Related posts

Leave a Reply