Header Ads
Breaking News

ಚಿಕ್ಕ ವಯಸ್ಸಿನಲ್ಲಿಯೇ ಗುರಿಯಿರುವುದು ಚೊಕ್ಕ : ಸುರೇಂದ್ರ. ಎಸ್

ಉಜಿರೆ: ” ಪ್ರತಿಯೊಬ್ಬರ ಜೀವನದಲ್ಲೊಂದು ಗುರಿ ಮುಖ್ಯ. ಆ ಗುರಿಯನ್ನು ನಾವು ಚಿಕ್ಕವಯಸ್ಸಿನಲ್ಲಿಯೇ ನಿರ್ಧರಿಸಬೇಕು. ವಿದ್ಯಾರ್ಥಿ ಜೀವನ ಅದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಂತೆಯೇ ಶಿಕ್ಷಕರು ವಿದ್ಯಾರ್ಥಿಗಳ ಬೆನ್ನೆಲುಬಾಗಿರುತ್ತಾರೆ ಎಂಬುದು ಅಷ್ಟೇ ನಿಜ. ದಿನೇ ದಿನೇ ಗುರಿಯೆಡೆಗೆ ಹತ್ತಿರವಾಗುವಲ್ಲಿ ನಮ್ಮ ಪ್ರಯತ್ನವಿರಬೇಕು. ಆಗ ಯಶಸ್ಸು ಸಾಧ್ಯ” ಎಂದು ಬೆಳ್ತಂಗಡಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಸುರೇಂದ್ರ ಎಸ್ ನುಡಿದರು

ಇವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಶ್ರೀ. ಧ. ಮಂ. ರೋಟರಿ ವೃತ್ತಿ ಮಾರ್ಗದರ್ಶನ ವಿಭಾಗ, ಶ್ರೀ.ಧ. ಮಂ. ಕಾಲೇಜು ಉಜಿರೆ, ಇದರ ಸಹಯೋಗದೊಂದಿಗೆ ಶ್ರೀ ಧ. ಮಂ ಪದವಿ ಕಾಲೇಜಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ. ಧ.ಮಂ. ಕಾಲೇಜು ಪ್ರಾಂಶುಪಾಲರಾದ ಪ್ರೊ.ಎಸ್ ಸತೀಶಚಂದ್ರ, ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಈ ೨ ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐ.ಎ.ಎಸ್/ಐ.ಪಿ.ಎಸ್/ಕೆ.ಎ.ಎಸ್/ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಿಳಿಸಿಕೊಡಲಾಯಿತು.ಬೆಳ್ತಂಗಡಿಯ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಮುಖ್ಯ ಅತಿಥಿಗಳಾಗಿದ್ದರು. ಸಮಾರೋಪ ಸಮಾರಂಭದಲ್ಲಿ ಸುರೇಂದ್ರ. ಎಸ್. ನಿವೃತ್ತಿ ಹೊಂದಿದ ಪ್ರಯುಕ್ತ ಸನ್ಮಾನ ನೆರವೇರಿಸಲಾಯಿತು.

ಸಂಪನ್ಮೂಲ ವ್ಯಕಿಗಳಾದ ಗುರುದೇವ ಐ.ಎ.ಎಸ್ ಅಕಾಡೆಮಿಯ ಅಖಿಲ್ ಕುಮಾರ್ ಹಲಗತ್ತಿ, ಸಂತೋಷ್.ಆರ್, ಮಂಜುನಾಥ್ ಹಾಗೂ ಚಂದ್ರಶೇಖರ್, ಶ್ರೀ. ಧ.ಮಂ. ಪದವಿಪೂರ್ವ ಕಾಲೇಜಿ ಪ್ರಾಂಶುಪಾಲ ದಿನೇಶ್ ಚೌಟ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ ಪಿ.ಎನ್ ಉದಯಚಂದ್ರ ಹಾಗೂ ಪ್ರಾಧ್ಯಪಕರು ಉಪಸ್ಥಿತರಿದ್ದರು. ವಿಧ್ಯಾಥಿಗಳಾದ ಪೂಜ ನಿರೂಪಿಸಿ, ಸಾಫಲ್ಯ ಸ್ವಾಗತಿಸಿ, ಸಂಪ್ರಿತಾ ವಂದಿಸಿದರು.

Related posts

Leave a Reply

Your email address will not be published. Required fields are marked *