Header Ads
Breaking News

ಚಿಗುರು ಪತ್ರಿಕೆ ಬಿಡುಗಡೆ

ಕ್ರೀಯಾಶೀಲತೆ ಕರ್ತ್ರುತ್ವ ಶಕ್ತಿ ಅಧ್ಯಯನ ಶೀಲತೆ ಹಾಗೂ ಅಪಾರ ತಿಳುವಳಿಕೆ ಉಳ್ಳವರಿಗೆ ಮಾಧ್ಯಮದಲ್ಲಿತುಂಬಾ ಅವಕಾಶಗಳಿವೆ. ಅದರಲ್ಲೂ ವಿಶೇಷವಾಗಿಡಿಜಿಟಲ್ ಮಿಡಿಯಾದಲ್ಲಿ ಅಪರಿಮಿತ ಉದ್ಯೋಗಾವಕಾಶಗಳಿವೆ ಎಂದು ಉಪಯುಕ್ತ ಡಾಟ್‌ಕಾಮ್ ನ್ಯೂಸ್ ಪೊರ್ಟಲ್‌ನ ಸಂಪಾದಕಚಂದ್ರಶೇಖರ ಕುಳಮರ್ವ ಹೇಳಿದರು.

ಅವರುಉಜಿರೆ ಶ್ರೀ.ಧ.ಮ ಕಾಲೇಜಿನ ಪತ್ರಿಕೋಧ್ಯಮ ವಿಧ್ಯಾರ್ಥಿಗಳು ರೂಪಿಸಿರುವ ಈ ಶೈಕ್ಷಣಿಕ ವರ್ಷದ ಮೊದಲ ಡಿಜಿಟಲ್ ರೂಪದ ಪತ್ರಿಕೆಚಿಗುರು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.ಆನ್‌ಲೈನ್ ರೂಪದಲ್ಲಿ ನಡೆದ ಈ ಸಮಾರಂಭದಲ್ಲಿ ಅವರು ತಂತ್ರಜ್ಞಾನದ ತಿಳುವಳಿಕೆಯ ಅಗತ್ಯತೆಯನ್ನುಒತ್ತಿ ಹೇಳಿದರು.

ತಂತ್ರಜ್ಞಾನಇಂದು ಮಾಧ್ಯಮರಂಗದೊಟ್ಟಿಗೆ ಮೆಳೈಸಿದ್ದು ಇದರೊಟ್ಟಿಗೆಕೌಶಲ್ಯವನ್ನು ಅಳವಡಿಸಿದ್ದಲ್ಲಿ ಉಜ್ವಲ ಭವಿಷ್ಯ ಲಭ್ಯಎಂದು ಹೇಳಿದರು.ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆಯವರು ಸಾಂದರ್ಭಿಕವಾಗಿ ಮಾತನಾಡಿಚಿಗುರು ಭಿತ್ತಿ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಅಗತ್ಯವಿರುವ ಹಲವು ಕೌಶಲ್ಯಗಳನ್ನು ಕಲಿಯಬಹುದಾಗಿದೆ ಎಂದರು. ಅಂತಿಮ ಬಿ.ಎ ಯತರಗತಿ ಪ್ರತಿನಿಧಿ ಸಿಂಧು ಸ್ವಾಗತಿಸಿ, ಶಶಾಂಕ ಪತ್ರಿಕೆಯನ್ನು ಪರಿಚಯಿಸಿ,ಅಮೃತಾ ಪೂರಕ ಮಾಹಿತಿ ನೀಡಿದರು.ರಶ್ಮಿ ವಂದಿಸಿದರು.

Related posts

Leave a Reply

Your email address will not be published. Required fields are marked *