Header Ads
Header Ads
Header Ads
Breaking News

ಚಿಣ್ಣರ ಲೋಕ ಮೋಕೆದ ಕಲಾವಿದರಿಂದ “ಕರಾವಳಿ ಕಲೋತ್ಸವ 2019-20″ವಿನೂತನ ಕಾರ್ಯಕ್ರಮ

ಬಂಟ್ವಾಳ: ಮಕ್ಕಳು ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಚಿಣ್ಣರ ಲೋಕ ಮೋಕೆದ ಕಲಾವಿದರ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿ ಹಾಕಲಾದ ಕೀರ್ತಿಶೇಷ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ವೇದಿಕೆಯಲ್ಲಿ ಜ.1ರ ವೆರಗೆ ನಡೆಯಲಿರುವ “ಕರಾವಳಿ ಕಲೋತ್ಸವ 2019-20” ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇದೇವೇಳೆ ಚಿಣ್ಣರ ಚಿತ್ತಾರ ಚಿತ್ರಕಲೆ, ವಸ್ತು ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್‍ನ್ನು ಉದ್ಘಾಟಿಸಲಾಯಿತು. ಯಕ್ಷಗಾನ ಕಲಾವಿದ, ಸಂಘಟಕ ಸರಪಾಡಿ ಆಶೋಕ್ ಶೆಟ್ಟಿ ಅವರಿಗೆ “ಕರಾವಳಿ ಸೌರಭ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಂಗೀತ ಕ್ಷೇತ್ರದ ಪ್ರತಿಭೆ ಜನ್ಯಾಪ್ರಸಾದ್ ಅನಂತಾಡಿ ಅವರಿಗೆ ಚಿಣ್ಣರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿಣ್ಣರೋತ್ಸವ 2019 ಅಧ್ಯಕ್ಷ ಮಾ.ಆಶ್ಲೇಷ್ ಕೆ. ಪೆÇಲೀಸ್ ಲೈನ್, ಕಲಾವಿದೆ ದೀಕ್ಷಾ ಡಿ. ರೈ ಪುತ್ತೂರು, ತಹಶೀಲ್ದಾರ್ ರಶ್ಮೀ ಎಸ್.ಆರ್., ಮಾಜಿ ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *