Breaking News

ಚಿತ್ರಾಪುರದ ಮನೆಯೊಂದರಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ, ಕುತ್ತಿಗೆಯಲ್ಲಿದ್ದ ಸರ ಕಸಿದು ಪರಾರಿ, ಸುರತ್ಕಲ್ ಪೊಲೀsಸರಿಂದ ತನಿಖೆ

ಸುರತ್ಕಲ್‌ನ ಚಿತ್ರಾಪುರದ ಮನೆಯೊಂದರಲ್ಲಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಘಟನೆ ನಡೆದಿದೆ.
ಎಂಟು ಮಂದಿಯ ತಂಡ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಚಿತ್ರಾಪುರದ ಸರಸ್ವತಿ ಎಂಬವರನ್ನು ಕಟ್ಟಿ ಹಾಕಿ ಅವರ ಕುತ್ತಿಗೆಯಿಂದ ಕರಿಮಣಿ ಸರ, ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply