Header Ads
Breaking News

ಚಿತ್ರಾಪುರ, ಕುಳಾಯಿ, ಬೈಕಂಪಾಡಿ ಪ್ರದೇಶದಲ್ಲಿ ತೀವ್ರಗೊಂಡ ಕಡಲ್ಕೊರೆತ

ಕರಾವಳಿಯಲ್ಲಿ ಸುರಿದ ಭಾರೀ ಮಳೆ ಸುರಿಯುತ್ತಿದ್ದು ಅಪಾರ ಹಾನಿ ಸಂಭವಿಸಿದ್ದು ಒಂದು ಕಡೆಯಾದರೆ ಚಿತ್ರಾಪುರ, ಕುಳಾಯಿ, ಬೈಕಂಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ಬಿರುಸುಗೊಂಡಿದೆ. ಚಿತ್ರಾಪುರ ರಸ್ತೆ ಅರ್ಧಭಾಗ ಸಮುದ್ರ ಪಾಲಾಗಿದ್ದು, ಮನೆಗಳು ಅಪಾಯದಂಚಿನಲ್ಲಿದೆ. ಮುಕ್ಕ ಪರಿಸರದಲ್ಲೂ ಕಡಲೊರೆತ ತೀವ್ರಗೊಂಡಿದೆ.ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರದ ಜೊತೆಗೆ ಕಡಲು ರೌದ್ರವತಾರ ತಾಳಿದೆ. ಕೆಲವಡೆ ಕಡಲ್ಕೊರೆತ ಬಿರುಸುಗೊಂಡಿದೆ. ಕಡಲ್ಕೊರೆತ ತಡೆಗೆ ಕಲ್ಲು ಮತ್ತು ಮರಳು ಚೀಲಗಳನ್ನು ಅಳವಡಿಸಿದರೂ ಸಮುದ್ರಪಾಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೆಸ್ಕಾಂ ವಿದ್ಯುತ್ ಸರಬರಾಜು ನಿಲುಗಡೆ ಗೊಳಿಸಿದೆ. ಮೀನುಗಾರಿಕೆ ರಸ್ತೆ ಪಣಂಬೂರಿನಿಂದ ಸುರತ್ಕಲ್ ಮುಕ್ಕದವರೆಗೂ ಇದ್ದು, ಹಲವೆಡೆ ಕಲ್ಲುಗಳನ್ನು ತಡೆಗೋಡೆಯಾಗಿ ಬಳಸಲಾಗಿದೆ. ಇನ್ನು ಉಳಿದೆಡೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ತುರ್ತು ಕ್ರಮವಾಗಿ ಮರಳು ಚೀಲಗಳನ್ನು ತಡೆಯಾಗಿ ಬಳಸಲು ಕ್ರಮ ಕೈಗೊಂಡಿದ್ದಾರೆ.
ಚಿತ್ರಾಪುರ ದೇವಸ್ಥಾನದ ಮುಂಭಾಗದಲ್ಲಿ ಬೀಚ್ ಸಮೀಪ ಮಾಡಲಾದ ಮೆಟ್ಟಿಲು, ರಸ್ತೆ ಕಡಲ್ಕೊರೆತಕ್ಕೆ ಕೊಚ್ಚಿಹೋಗುತ್ತಿದ್ದು, ಮರಳು ಚೀಲ ಅಳವಡಿಸುವ ಕಾರ್ಯ ನಡೆಯಿತು. ಸುಮಾರು ೨೦ಕ್ಕೂ ಅಧಿಕ ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೀಗ ಮತ್ತೆ ಕಡಲ್ಕೊರೆತ ಆರಂಭವಾಗಿದ್ದು, ಸಮುದ್ರ ತೀರ ಕೊಚ್ಚಿಹೋಗುತ್ತಿದೆ. ತೆಂಗಿನ ಮರ, ರಸ್ತೆ, ಮೈದಾನಗಳು ಸಮುದ್ರದ ಒಡಲಲ್ಲಿ ಲೀನವಾಗುತ್ತಿದೆ.

Related posts

Leave a Reply

Your email address will not be published. Required fields are marked *