Header Ads
Breaking News

ಚಿತ್ರ ರಚನೆಯ ಹೊಸ ಹಾದಿಯಲ್ಲಿ ಗಮನ ಸೆಳೆಯುತ್ತಿರುವ ರಾಫಿಯಾ

ಮಂಜೇಶ್ವರ: ಕೊರೊನಾ ಲಾಕ್‍ಡೌನ್ ಹಲವರಿಗೆ ಶಾಪವಾಗಿದ್ದರೂ ಇನ್ನು ಕೆಲವರಿಗೆ ಅದು ವರದಾನವಾಗಿದೆ. ಕೊರೋನಾ ಲಾಕ್ ಡೌನ್ ಸಂದರ್ಭಗಳಲ್ಲಿ ಚಿತ್ರ ರಚನೆಯ ಹವ್ಯಾಸವಿದ್ದ ಯುವತಿಯೊಬ್ಬಳು ನೂತನ ಹಾದಿಯಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆದಿದ್ದಾಳೆ. ಉಪ್ಪಳ ಫತ್ವಾಡಿ ನಿವಾಸಿಯಾಗಿರುವ ರಾಫಿಯಾ ಎಂಬಾಕೆ ಖ್ಯಾತ ವ್ಯಕ್ತಿಗಳ ಹೆಸರುಗಳ ಅಕ್ಷರಗಳನ್ನು ಹಾಗೂ ಅವರ ಸಾಧನೆಗಳನ್ನು ಉಪಯೋಗಿಸಿ ರಚಿಸುತ್ತಿರುವ ಚಿತ್ರಗಳು ಸೆಳೆಯುತ್ತಿದೆ. ಮಲಯಾಳ ಇಂಗ್ಲಿμï ಹಾಗೂ ಇತರ ಭಾμÉಗಳ ಅಕ್ಷರಗಳನ್ನು ಉಪಯೋಗಿಸಿ ರಾಫಿಯಾ ಚಿತ್ರ ರಚಿಸುತ್ತಿದ್ದಾರೆ.

ಬೇಕೂರು ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಈಕೆ ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದ ಕನ್ನಡತಿಯಾಗಿದ್ದಾರೆ. ಚಿಕ್ಕಂದಿನಲ್ಲೇ ಚಿತ್ರ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಈಕೆ ಶಾಲಾ ಕಲೋತ್ಸವಗಳಲ್ಲಿ ಚಿತ್ರ ರಚನೆ, ಪೈಟಿಂಗ್ , ಪೆನ್ಸಿಲ್ ದ್ರಾಯಿಂಗ್ ಗಳಲ್ಲಿ ಭಾಗವಹಿಸಿ ಪುರಸ್ಕಾರವನ್ನು ತನ್ನದಾಗಿಸಿದ್ದರು. ಪದವಿ ಶಿಕ್ಷಣದಲ್ಲೂ ಈಕೆ ಚಿತ್ರ ರಚನೆಯ ಆಸಕ್ತಿಯನ್ನು ಉಳಿಸಿಕೊಂಡಿದ್ದಾಳೆ. ಪ್ರಸ್ತುತ ಮೂಡಬಿದಿರೆ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರೀ ಉಪನ್ಯಾಸಕಿಯಾಗಿರುವ ಈಕೆ ಲಾಕ್ ಡೌನ್ ಸಂದರ್ಭಗಳಲ್ಲಿ ಮನೆಯಲ್ಲೇ ಕುಳಿತು ಈ ರೀತಿಯ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ಈಕೆ ರಚಿಸಿದ ಚಿತ್ರಗಳ ಪೈಕಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಪಿಣರಾಯಿ ವಿಜಯನ್, ಮಹಾತ್ಮ ಗಾಂಧಿ, ಸುಬಾಶ್ ಚಂದ್ರ ಬೋಸ್, ಸಿನಿಮಾ ತಾರೆಗಳಾದ ಮೋಹನ್ ಲಾಲ್, ಮಮ್ಮುಟ್ಟಿ, ಚಾರ್ಲಿ ಚಾಪ್ಲಿನ್ ಸಹಿತ ಹಲವು ಖ್ಯಾತ ನಾಯಕರುಗಳು ಸೇರಿದ್ದಾರೆ. ಕಾಸರಗೋಡು ನಿವಾಸಿ ಇರ್ಷಾದ್ಎಂಬವರ ಧರ್ಮ ಪತ್ನಿಯಾಗಿರುವ ರಾಫಿಯಾ ಉಪ್ಪಳ ನಿವಾಸಿ ಅಬ್ದುಲ್ ಖಾದರ್ ಹಾಗೂ ಜುಬೈದಾ ದಂಪತಿಗಳ ಪುತ್ರಿಯಾಗಿದ್ದಾಳೆ.

Related posts

Leave a Reply

Your email address will not be published. Required fields are marked *