Header Ads
Header Ads
Header Ads
Breaking News

ಚಿಲ್ಲರೆ ಹಣದುಬ್ಬರ ಇನ್ನಷ್ಟು ಏರಿಕೆ ಸಂಭವ ಜಿ‌ಎಸ್‌ಟಿ ದರ ಪರಿಷ್ಕರಣೆ ಆಗಿರುವುದರಿಂದ ಕೆಲವು ಉತ್ಪನ್ನಗಳ ಬೆಲೆ ಇಳಿಕೆ ಸಾಧ್ಯತೆ

ತರಕಾರಿ ಮತ್ತು ತೈಲ ಬೆಲೆ ಹೆಚ್ಚಾಗುತ್ತಿರುವುದರಿಂದ ಚಿಲ್ಲರೆ ಹಣದುಬ್ಬರ ಶೇ 4 ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಿನಲ್ಲಿ 7 ತಿಂಗಳ ಗರಿಷ್ಠ ಮಟ್ಟವಾದ ಶೇ 3.58 ಕ್ಕೆ ಏರಿಕೆ ಕಂಡಿದೆ.ಆರ್ಥಿಕತೆಯಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ತರಕಾರಿ, ತೈಲ ಬೆಲೆಗಳ ಏರಿಕೆಯಿಂದಾಗಿ ಚಿಲ್ಲರೆ ಹಣದುಬ್ಬರದ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಲಿದೆ ಎಂದು ನೂಮುರಾ, ಬ್ಯಾಂಕ್ ಆಫ್ ಅಮೆರಿಕ ಮೆರ್ರಿ ಲಿಂಚ್ ಹಾಗೂ ಮೋರ್ಗನ್ ಸ್ಟ್ಯಾನ್ಲಿಯಂಥ ಜಾಗತಿಕ ಹಣಕಾಸು ಸೇವಾ ಸಂಸ್ಥೆಗಳು ಅಂದಾಜಿಸಿವೆ.

ಆಹಾರ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಈರುಳ್ಳಿ, ಬೇಳೆಕಾಳು ಸೇರಿದಂತೆ ಕೆಲವು ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಹಣದುಬ್ಬರ ಇಳಿಕೆ ಕಾಣುವ ಸಾಧ್ಯತೆ ಇದೆ. ಆದಾಗ್ಯೂ ಕಚ್ಚಾ ತೈಲ ಬೆಲೆ ಏರಿಕೆಯಿಂದ ಹಣದುಬ್ಬರ ಏರಿಕೆ ಕಾಣಲಿದೆ. ಜಿ‌ಎಸ್‌ಟಿ ದರ ಪರಿಷ್ಕರಣೆ ಆಗಿರುವುದರಿಂದ ಕೆಲವು ಉತ್ಪನ್ನಗಳ ಬೆಲೆ ಇಳಿಯಲಿದೆ.

Related posts

Leave a Reply