Header Ads
Breaking News

ಚುನಾವಣಾ ರಿಟರ್ನಿಂಗ್ ಅಧಿಕಾರಿಯಿಂದ ಮೋಸದ ಆರೋಪ : ಕುಂಬಳೆ ಗ್ರಾ.ಪಂ.ನ ಬಿಜೆಪಿ ಸದಸ್ಯರಿಂದ ಪ್ರತಿಭಟನೆ, ಆಕ್ರೋಶ

ಕುಂಬಳೆ ಗ್ರಾ.ಪಂ.ನ ಚುನಾವಣಾ ರಿಟರ್ನಿಂಗ್ ಅಧಿಕಾರಿ ಲೀಗಿನೊಂದಿಗೆ ಕೈ ಜೋಡಿಸಿ ಮತದಾರ ಪಟ್ಟಿಯಿಂದ ಹಿಂದೂ ಮತಗಳನ್ನು ಅಳಿಸುತ್ತಿರುವುದಾಗಿ ಆರೋಪಿಸಿ ಬಿಜೆಪಿ ಪಂಚಾಯತ್ ಸದಸ್ಯರು ನಡೆಸಿದ ಪ್ರತಿಭಟನೆ ಘರ್ಷಣೆಗೆ ತಿರುಗಿದೆ. ಕುಂಬಳೆ ಪಂ. ವ್ಯಾಪ್ತಿಯಲ್ಲಿರುವ 21 ನೇ ವಾರ್ಡಿನಿಂದ ಸುಮಾರು 230 ಮತದಾರರನ್ನು ಹಾಗೂ ನಾಲ್ಕನೇ ವಾರ್ಡಿನಿಂದ 25 ಮಂದಿ ಮತದಾರರನ್ನು ಮತದಾರ ಪಟ್ಟಿಯಿಂದ ಅಳಿಸಿರುವುದಾಗಿ ಆರೋಪಿಸಲಾಗಿದೆ. ಮುಸ್ಲಿಂ ಲೀಗಿನಿಂದ ಹಣವನ್ನು ಪಡೆದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಕೃತ್ಯಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಸ್ಥಾನದಿಂದ ಉಚ್ಚಾಟಿಸುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ಮಾತಿಗೆ ಮಾತು ಬೆಳೆದ ಪ್ರತಿಭಟನೆ ಘರ್ಷಣೆಗೆ ತಿರುಗಿದಾಗ ಬಳಿಕ ಕುಂಬಳೆ ಪೊಲೀಸರು ಆಗಮಿಸಿ ಪ್ರತಿಭಟನಾನಿರತರನ್ನು ಚದುರಿಸಿದ್ದಾರೆ. ಸ್ಥಳೀಯಾಡಳಿತ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಪ್ರಸ್ತುತ ಕುಂಬಳೆ ಗ್ರಾ. ಪಂ. ಮುಸ್ಲಿಂ ಲೀಗ್ 12, ಬಿಜೆಪಿ 7, ಸಿಪಿಎಂ 2 ಕಾಂಗ್ರೆಸ್

Related posts

Leave a Reply

Your email address will not be published. Required fields are marked *