Header Ads
Header Ads
Breaking News

ಚುನಾವಣೆ ಬಂದಾಗ ಮಂದಿರ ವಿಷಯವನ್ನು ಕೈಗೆತ್ತಿಕೊಳ್ತಾರೆ:ಡಾ.ಜಿ.ಪರಮೇಶ್ವರ್

ರಾಮ ಮಂದಿರ ಮೂಲಕ ಬಿಜೆಪಿ ರಾಷ್ಟ್ರ ರಾಜಕಾರಣ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರೋಪಿಸಿದ್ರು. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 

ರಾಮ ಮಂದಿರ ಹೆಸರಲ್ಲೇ ಸುಮಾರು ಚುನಾವಣೆ ಎದುರಿಸಿದ್ದಾರೆ. ದೇವರ ಹೆಸರಲ್ಲಿ ಹಣ, ಇಟ್ಟಿಗೆ ಸಂಗ್ರಹಿಸಿದ್ದಾರೆ. ಆದರೆ ರಾಮ ಮಂದಿರ ಮಾತ್ರ ನಿರ್ಮಾಣ ಆಗ್ಲೇ ಇಲ್ಲ, ಪ್ರತಿ ಚುನಾವಣೆ ಬಂದಾಗ ಮಂದಿರ

ವಿಷಯವನ್ನು ಕೈಗೆತ್ತಿಕೊಳ್ತಾರೆ, ರಾಜಕೀಯ ದುರುದ್ದೇಶದಿಂದ ಮಾಡುತ್ತಿದ್ದಾರೆ ಅನ್ನೋದು ದೇಶದ ಜನತೆಗೆ ಗೊತ್ತಿದೆ ಎಂದು ಹೇಳಿದರು. ಸರ್ಕಾರದಿಂದ ಫೋನ್ ಕದ್ದಾಲಿಕೆ ಆರೋಪದ ಕುರಿತು ಪ್ರತಿಕ್ರಿಯೆಸಿ ಅವರು, ಬಿಜೆಪಿಯವರು ಆರೋಪ ಮಾಡುತ್ತಲೇ ಇರ್ತಾರೆ, ಅವರು ಬೇಕಾದಷ್ಟು ಆರೋಪ ಮಾಡ್ತಾರೆ. ಅವರು ಮಾಡಿದ ಆರೋಪ ಸತ್ಯ ಅಂತಾ ನೀವು ಭಾವಿಸಬೇಡಿ. ರಾಜ್ಯದ ಜನತೆಯೂ ಭಾವಿಸಲ್ಲ ಎಂದು ತಿಳಿಸಿದರು.ಕನಗನಮರಡಿಯಲ್ಲಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿ, ಬಾಲಕ ಬಿಟ್ಟು 28 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಔರಾದ್‌ಕಾರ್ ಸಮಿತಿ ವರದಿ ಜಾರಿ ವಿಚಾರಕ್ಕೆ ಕುರಿತು ಯಾವುದೇ ಡೆಡ್ ಲೈನ್ ಕೊಡ್ಲಿಲ್ಲ.ವರದಿ ಅನುಷ್ಠಾನ ಮಾಡ್ತೇವೆ
ವರದಿ ಪ್ರಕಾರ ನ್ಯಾಯ ಸಲ್ಲಿಸುತ್ತೇವೆ ಎಂದು ತಿಳಿಸಿದರು.

Related posts

Leave a Reply