Header Ads
Breaking News

ಚುನಾವಣೆ ಮುಗಿದ ಬಳಿಕ ನಮ್ಮನ್ನು ಮರೆಯಬೇಡಿ: ಸಂಸದರಿಗೆ ಆಟೋ ಚಾಲಕರ ಮನವಿ! ಸಭೆಯಲ್ಲಿ ರಿಕ್ಷಾ ಚಾಲಕರ ಮನವಿ

ಸುಳ್ಯ: ಬಿ.ಎಂ..ಎಸ್. ಶೇ. 99ರಷ್ಟು ರಿಕ್ಷಾ ಚಾಲಕರು ಬಿಜೆಪಿಗೆ ಮತ ಹಾಕುವವರು. ಆದರೆ ಓಟು ಮುಗಿದ ಮೇಲೆ ಮಾತ್ರ ನಮ್ಮನ್ನು ನೀವು ಮರೆಯಬಾರದು ಎಂದು ಬಿಎಂಎಸ್‌ನ ಹಿರಿಯರಾದ ಗೋಪಾಲಕೃಷ್ಣ ಭಟ್‌ರವರು ಸಂಸದರೊಂದಿಗೆ ಮನವಿ ಮಾಡಿದ್ದಾರೆ.

ಸುಳ್ಯಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಬಾಳೆಮಕ್ಕಿಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಎಂಎಸ್ ರಿಕ್ಷಾ ಚಾಲಕರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಈ ಮನವಿ ಮಾಡಲಾಯಿತು. ಸಂಸದ ನಳಿನ್‌ರವರು ಮೋದಿ ಸರಕಾರದ ಸಾಧನೆಗಳ ಕುರಿತು ಮತ್ತು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಆರಂಭದಲ್ಲಿ ರಿಕ್ಷಾ ಚಾಲಕರ ಮುಂದಿರಿಸಿದರು. ಬಳಿಕ ಸಂವಾದಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆ ಮಾತನಾಡಿದ ಗೋಪಾಲಕೃಷ್ಣ ಭಟ್‌ರವರು ಬಿಎಂಎಸ್‌ಗೆ ಒಂದು ಕಟ್ಟಡ ಆಗಬೇಕು. ಅದಕ್ಕಾಗಿ ಎಲ್ಲಾ ಯೋಜನೆಗಳನ್ನು ಮಾಡಿ ನಕ್ಷೆಯನ್ನು ಮಾಡಲಾಗಿದೆ. ಇದಕ್ಕೆ ತಾವು ಸಹಕಾರ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಮುಖರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಶಾಸಕ ಅಂಗಾರ, ಹರೀಶ್ ಕಂಜಿಪಿಲಿ, ಸುರೇಶ್ ಕಣೆಮರಡ್ಕ, ಸುಬೋಧ್ ಶೆಟ್ಟಿ ಮೇನಾಲ ಮೊದಲಾವರಿದ್ದರು. ಸುಮಾರು 50ರಷ್ಟು ಮಂದಿ ರಿಕ್ಷಾ ಚಾಲಕರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *