Header Ads
Header Ads
Breaking News

ಚೂಡಿ ಪೂಜೆ ಮೂಲಕ ಪ್ರಕೃತಿಯನ್ನು ನೆನಪು. ಶ್ರಾವಣ ಮಾಸದ ಮೊದಲ ವಾರದಲ್ಲಿ ನಡೆಸುವ ಪೂಜೆ. ಉಡುಪಿಯಲ್ಲಿ ವಿಶಿಷ್ಠ ಆಚರಣೆ ಕುರಿತ ಸ್ಟೋರಿ.

ಪೃಕೃತಿ ನಮಗೆ ಸಾಕಷ್ಟನ್ನು ನೀಡುತ್ತದೆ. ಆದರೆ ಅದಕ್ಕೆಪ್ರತಿಯಾಗಿ ನಾವು ಪ್ರಕೃತಿಯನ್ನು ಸ್ಮರಿಸುವ ಕೆಲಸಮಾಡುವುದಿಲ್ಲ.ಆದರೆ ಕರಾವಳಿಯ ಗೌಡ ಸಾರಸ್ವತಬ್ರಾಹ್ಮಣರು ಶ್ರಾವಣದಲ್ಲಿ ಚೂಡಿಪೂಜೆ ಮಾಡುವಮೂಲಕ ಪ್ರಕೃತಿಯನ್ನು ನೆನೆಯುತ್ತಾರೆ. ಶ್ರಾವಣಮಾಸದ ಮೊದಲ ವಾರದಲ್ಲಿ ಈ ಪೂಜೆಯನ್ನು ನಡೆಸಲಾಗುತ್ತದೆ.ಈ ವಿಶಿಷ್ಟ ಆಚರಣೆಯ ಕುರಿತ ಒಂದು ವರದಿ ಇಲ್ಲಿದೆ.ಶ್ರಾವಣ ಮಾಸ ಬಂತೆಂದರೆ ಸಾಕು ;ಕರಾವಳಿಯಗೌಡ ಸಾರಸ್ವತ ಕುಟುಂಬಗಳಲ್ಲಿ ಈ ದೃಶ್ಯ ಸರ್ವೇಸಾಮಾನ್ಯ. ಶ್ರಾವಣಮಾಸದ ಮೊದಲ ವಾರದಲ್ಲಿ ಮುತ್ತೈದೆಯರು ತುಳಸಿ ಕಟ್ಟೆ ಬಳಿ ಸಾಮೂಹಿಕವಾಗಿಚೂಡಿ ಪೂಜೆ ನಡೆಸುವುದು ಪದ್ಧತಿ.ಪ್ರಕೃತಿಯಲ್ಲಿಹೇರಳವಾಗಿ ಸಿಗುವ ಕರವೀರ ,ಅಗತೆ ಹೂವು,ಮಿಠಾಯಿ ಹೂವು ,ನೆಲನೆಲ್ಲಿ ,ಅನ್ವಾಲಿ ,ರಥ ಹೂ,ಗಂಟಿ ಗಿಡ ,ಕಾಗೆ ಕಣ್ಣು ,ಶಂಕಪುಷ್ಪ ,ರತ್ನ ಗಂಧಿಮತ್ತು ಗರಿಕೆಗಳನ್ನು ಸುಂದರವಾಗಿ ಜೋಡಿಸಿ”ಚೂಡಿ”ಮಾಡಿ ಅದನ್ನು ಬಾಳೆಯ ನಾರಲ್ಲಿ ಕಟ್ಟಲಾಗುತ್ತದೆ. ಬಳಿಕ ತುಳಸಿ ಕಟ್ಟೆ ಮುಂದೆ ಇರಿಸಿ ,ಪ್ರದಿಕ್ಷಿಣೆ ಹಾಕಿ ಅಕ್ಷತೆಹಾಕಲಾಗುತ್ತದೆ.ಬಳಿಕ ಮನೆಯ ಹೊಸ್ತಿಲಲಿಟ್ಟು ದೇವತೆಗಳನ್ನು ಸ್ವಾಗತಿಸುತ್ತಾರೆ .ಮುತ್ತೈದೆಯರು ತುಳಸಿಗೆ ಈಪೂಜೆಸಲ್ಲಿಸುವುದರಿಂದ ಗಂಡಂದಿರಿಗೆ ಮತ್ತು ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬುದು ಪ್ರತೀತಿ.ಪತಿಯ ಆರೋಗ್ಯ ಚೆನ್ನಾಗಿರಲಿ.ದಾಂಪತ್ಯಚೆನ್ನಾಗಿರಲಿ ಎಂಬ ಉದ್ದೇಶಕ್ಕೆ ಈ ಪೂಜೆನೆರವೇರಿಸಲಾಗುತ್ತದಾದರೂ ಇದರ ಹಿಂದೆಪ್ರಕೃತಿಯನ್ನು ನೆನೆಯುವ ಕಲ್ಪನೆಯೂಅಡಗಿದೆ.ಸರಸ್ವತಿ ನದೀ ತೀರದಲ್ಲಿ ಹಿಂದೆ ಇದ್ದ ವಂಶ ಗೌಡ ಸಾರಸ್ವತ ರು.ಈ ವಂಶ ಕಾಡಿನಲ್ಲಿ ಬದುಕುತ್ತಿತ್ತೆಂದೂ ,ಶೃಂಗಾರ ಪ್ರಿಯರಾದ ಇವರುಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ದೊರೆತಹೂಗಳನ್ನು ಚೂಡಿ ಕಟ್ಟಿ ಪೂಜಿಸುತ್ತಿದ್ದರು ಎಂಬುದುಐತಿಹ್ಯ ;ಈ ಸಂಪ್ರದಾಯ ಇಂದಿಗೂ ನಡೆದುಕೊಂಡುಬಂದಿದ್ದು ,ಕೆಲವೆಡೆ ದೇವಸ್ಥಾನಗಳಲ್ಲಿ ಪೂಜೆಯವ್ಯವಸ್ಥೆ ಮಾಡಿದರೆ ,ಕೆಲವು ಮನೆಗಳಲ್ಲಿಮುತ್ತೈದೆಯರು ಸಾಮೂಹಿಕವಾಗಿ ಚೂಡಿ ಪೂಜೆ ಆಚರಿಸುತ್ತಾರೆ..ಹೊಸದಾಗಿ ಮದುವೆಯಾದ ನವ ತರುಣಿಯರಿಗಂತೂ ಈ ಹಬ್ಬ ಬಂದ್ರೆ ಎಲ್ಲಿಲ್ಲದ ಸಂತೋಷ. ಪತಿಯ ಜೊತೆಗೆ ತವರಿಗೆ ಹೋಗೋದು, ತಮ್ಮ ಸಮುದಾಯದ ಮನೆಯಲ್ಲಿ ನಡೆದ ಚೂಡಿ ಹಬ್ಬದಲ್ಲಿ ಸಿಕ್ಕ ಚೂಡಿಯನ್ನು ಮುಡಿಸಿಕೊಂಡು ಆಶೀರ್ವಾದವನ್ನು ಪಡೆಯೋದು ಒಂದು ಭಾವನಾತ್ಮಕ ಕ್ಷಣವಾಗಿರುತ್ತೆ.ಈ ಚೂಡಿ ಪೂಜೆ ಮೂಲಕ ಪ್ರಕೃತಿ ಪೂಜೆ ಜೊತೆಗೆ ಮುತ್ತೈದೆ ಬಾಗ್ಯ ಆರೋಗ್ಯ ಐಶ್ವರ್ಯ ವೃದ್ದಿಸಿಕೊಳ್ಳುವ ನಂಬಿಕೆ ತಲೆತಲಾಂತರಗಳಿಂದ ನಡೆದುಕೊಂಡುಬಂದಿದೆ. ಈ ಚೂಡಿ ಹಬ್ಬ ಮೊದಲ ಶ್ರಾವಣ ಮಾಸದ ಮೊದಲ ವಾರ ಬಂದಿರುವುದು ಮುತ್ತೈದೆಯರಲ್ಲಿ ಇನ್ನಷ್ಟು ಖುಷಿ ತಂದಿದೆ.ಗೌಡ ಸಾರಸ್ವತರಲ್ಲದೆ ವಿಶ್ವಕರ್ಮರಲ್ಲಿ ಮತ್ತುದೈವಜ್ನರಲ್ಲೂ ಈ ಪದ್ಧತಿ ಚಾಲ್ತಿಯಲ್ಲಿದೆ.ಒಟ್ಟಿನಲ್ಲಿಪ್ರಕೃತಿಯನ್ನು ಸ್ಮರಿಸುವ ಈ ವಿಶಿಷ್ಟ ಪೂಜೆ-ಸಂಪ್ರದಾಯ ಈಗಲೂ ಚಾಚೂ ತಪ್ಪದೆನಡೆದುಕೊಂಡು ಬಂದಿದೆ.ಏನೇ ಆಗ್ಲಿ ಇಂತಹ ಹಬ್ಬದ ಮೂಲಕ ಸಮುದಾಹ ಹಾಗೂ ಕುಟುಂಬದ ನಡುವೆ ಭಾಂಧವ್ಯ ಇನ್ನಷ್ಟು ವೃದ್ಧಿಯಾಗಲಿ ಅನ್ನೋದೇ ಎಲ್ಲರ ಆಶಯ.

Related posts

Leave a Reply