Breaking News

ಚೆಂಬುಗುಡ್ಡೆ ಸಮೀಪ ಸರಣಿ ಅಪಘಾತ, ಮೂರು ಬೈಕುಗಳಿಗೆ ಡಿಕ್ಕಿ ಹೊಡೆದ ನೀರಿನ ಟ್ಯಾಂಕರ್, ಆರು ಮಂದಿಗೆ ಗಾಯ ಇಬ್ಬರು ಗಂಭೀರ

ನಗರದ ತೊಕ್ಕೊಟ್ಟು ಬಳಿ ಇರುವ ಚೆಂಬುಗುಡ್ಡೆ ಸಮೀಪ ಸರಣಿ ಅಪಘಾತ ಸಂಭವಿಸಿ ಹಲವರಿಗೆ ಗಾಯವಾಗಿದೆ.
ರಸ್ತೆಯಲ್ಲಿ ಚಲಿಸುತಿದ್ದ ಮೂರು ಬೈಕ್‌ಗಳಿಗೆ ನೀರಿನ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಆರು ಮಂದಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಕೆಲಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು.

Related posts

Leave a Reply