Header Ads
Header Ads
Breaking News

ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಸ್ವಿಮ್ಮಿಂಗ್ ಸ್ಪರ್ಧೆ: ಮಂಗಳೂರಿನ ರಚನಾ ರಾವ್, ಸ್ಮೃತಿ ಕೂಟ ದಾಖಲೆ

ಚೆನ್ನೈನ ಗಿಂಡಿಯ ವೆಲ್ಲಚೇರಿಯಲ್ಲಿರುವ ಈಜು ಕ್ರೀಡಾ ಸಂಕೀರ್ಣದಲ್ಲಿ ನಡೆದ 30ನೇ ದಕ್ಷಿಣ ವಲಯ ಈಜು ಪಂದ್ಯಾವಳಿಯ ಮೊದಲ ದಿನದ ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್‌ನ ಈಜುಪಟು ಎಸ್.ಆರ್. ರಚನಾ ರಾವ್ ಮತ್ತು ಸ್ಮೃತಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಹೊಸ ಕೂಟ ದಾಖಲೆ ಮಾಡಿದ್ದಾರೆ.


ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಹೈಸ್ಕೂಲ್ ವಿದ್ಯಾರ್ಥಿ ಎಸ್.ಆರ್ ರಚನಾ ರಾವ್ ೫೦ ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ತಮಿಳುನಾಡಿನ ಎ.ವಿ. ಜಯವೀಣಾ ಇವರು 2012ರಲ್ಲಿ ನಿರ್ಮಿಸಿದ (00.36.37) ಹಾಗೂ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ತಮಿಳುನಾಡಿನ ಎಂ. ರಾಘವಿ ಇವರು 2009ರಲ್ಲಿ ನಿರ್ಮಿಸಿದ(02.56.24) ದಾಖಲೆ ಮುರಿದು 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ (00.36.33) ಹಾಗೂ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ(02.50.97 ಹೊಸ ಕೂಟ ದಾಖಲೆಗಳೊಂದಿಗೆ ಎರಡು ಚಿನ್ನದ ಪದಕ ಪಡದುಕೊಂಡಿದ್ದಾರೆ.

ಕ್ಲಬ್‌ನ ಇನ್ನೋರ್ವ ಸದಸ್ಯೆ ಹಾಗೂ ಅತ್ತಾವರ ಸರೋಜಿನಿ ಮಧುಸೂದನ್ ಡಿ. ಕುಶೆ ಶಾಲೆಯ ವಿದ್ಯಾರ್ಥಿ ಆರಾಧನಾ ಬೇಕಲ್ ಕೇರಳ ರಾಜ್ಯವನ್ನು ಪ್ರತಿನಿಧಿಸಿ 50 ಹಾಗೂ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 2 ಕಂಚಿನ ಪದಕ ಗಳಿಸಿರುತ್ತಾರೆ.

ಮಂಗಳಾ ಈಜು ಕ್ಲಬ್‌ನ ಮತ್ತೋರ್ವ ಸದಸ್ಯೆ ಹಾಗೂ ಬಂಟ್ಸ್ ಹಾಸ್ಟೆಲ್ ಶ್ರೀ ರಾಮಕೃಷ್ಣ ಹೈಸ್ಕೂಲ್ ವಿದ್ಯಾರ್ಥಿ ಸಾನ್ಯಾ ಡಿ. ಶೆಟ್ಟಿ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 100 ಮೀಟರ್ ಹಾಗೂ 200 ಮೀಟರ್ ಬಟರ್ ಪ್ಲೈ ಸ್ಪರ್ಧೆಗಳಲ್ಲಿ ತಲಾ 1ರಂತೆ 2 ಚಿನ್ನದ ಪದಕಗಳು ಮತ್ತು 50 ಮೀಟರ್ ಬಟರ್ ಪ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.
ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಸದಸ್ಯೆ ಹಾಗೂ ಲೇಡಿಹಿಲ್ ಅಂಗ್ಲ ಮಾಧ್ಯಮ ಪ್ರೈಮರಿ ಸ್ಕೂಲ್‌ನ ಸ್ಮೃತಿ ಇಂದು ಮತ್ತೊಂದು ಕೂಟ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ವಲಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸ್ಮೃತಿ 50 ಮೀಟರ್ ಬಟರ್ ಪ್ಲೈನಲ್ಲಿ ಬೆಳ್ಳಿ ಪದಕ ಗೆದ್ದಿರುವುದು ಮಂಗಳೂರಿಗೆ ಹೆಮ್ಮೆಯ ವಿಚಾರ.
ಇಂದು ನಡೆದ 50 ಮೀಟರ್ ಪ್ರೀ ಸ್ಟೈಲ್‌ನಲ್ಲಿ ಎಸ್.ಆರ್. ರಚನಾ ರಾವ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಚೆನ್ನೈನ ವೆಲ್ಲಚೇರಿಯಲ್ಲಿ ಮೂರು ದಿನಗಳ ಕಾಲ ನಡೆದ ದಕ್ಷಿಣ ವಲಯ ಈಜು ಸ್ಪರ್ಧೆ ಮುಕ್ತಾಯಗೊಂಡಿದ್ದು, ಮಂಗಳೂರಿನ ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಈಜುಪಟುಗಳಾದ ಎಸ್.ಆರ್. ರಚನಾ ರಾವ್ ನಾಲ್ಕು ಚಿನ್ನ ಒಂದು ಬೆಳ್ಳಿ, ಸಾನಿಯಾ ಡಿ. ಶೆಟ್ಟಿ 3 ಚಿನ್ನ, ಒಂದು ಬೆಳ್ಳಿ, ಸ್ಮೃತಿ 1 ಬೆಳ್ಳಿ, ಆರಾಧನಾ 4 ಕಂಚಿನ ಪದಕ ಪಡದು ಅದ್ವೀತಿಯ ಸಾಧನೆ ಮಾಡಿದ್ದಾರೆ.

ಈ ಈಜುಪಟುಗಳು ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಈಜು ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಶಿವಾನಂದ್ ಗಟ್ಟಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Related posts

Leave a Reply