Header Ads
Breaking News

ಚೆರುಗೋಳಿ ಶ್ರೀ ಚೀರುಂಬಾ ಕ್ಷೇತ್ರ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ

ಮಂಜೇಶ್ವರ: ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಚೆರುಗೋಳಿ ದರ ಪುನರ್ ಪ್ರತಿಷ್ಟಾ ಬ್ರಹ್ಮ ಕಲಶೋತ್ಸವ ಮತ್ತು ನಡಾವಳಿ ಉತ್ಸವ ಮಾರ್ಚ್ 3ರಿಂದ 9ರ ತನಕ ವಿವಿಧ ವೈಧಿಕ, ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದಾಗಿ ಕೆ ಶಶಿಧರನ್ ಐಎಎಸ್‍ರವರು ತಿಳಿಸಿದರು.

ಅವರು ಮಂಜೇಶ್ವರ ಪ್ರೆಸ್ ಕ್ಲಬ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 3 ರಂದು ಸಂಜೆ3.30 ರಿಂದ ಐಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ ಪರಿಸರದಿಂದ ಹೊರೆ ಕಾಣಿಕೆ ಮೆರವಣಿಗೆ ಆಗಮಿಸಲಿದೆ. ಬಳಿಕ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಇವರಿಗೆ ಪೂರ್ಣ ಕುಂಭ ಸ್ವಾಗತ ಕಾರ್ಯಕ್ರಮ. ಬಳಿಕ ರಾತ್ರಿ ಮಹಾ ಪೂಜೆ ನಡೆಯಲಿದೆ.3 ರಿಂದ 7 ರ ತನಕ ನಡೆಯಲಿರುವ ಬ್ರಹ್ಮ ಕಲಶೋತ್ಸವದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. 8 ರಂದು ನಡಾವಳಿ ಮಹೋತ್ಸವ ನಡೆಯಲಿದೆ. ಸಮಾರೋಪ ದಿವಸವಾದ 9 ರಂದು ಶ್ರೀ ಮಲರಾಯ ಮತ್ತು ಬಂಟ ದೈವಗಳ ನೇಮೋತ್ಸವ, ಬಳಿಕ ಗುಳಿಗನ ಕೋಲ ನಡೆಯಲಿದೆ. ಬಲಿ ಉತ್ಸವದಂದು ರಾತ್ರಿ ಕುಟ್ಟಿ ತೈಯ್ಯಂ ನಾಟಕ ಜರಗಲಿದೆ. ಬ್ರಹ್ಮ ಕಲಶೋತ್ಸವದ ದಿನಗಳಲ್ಲಿ ಮದ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ರಾಮಚಂದ್ರ ಸಿ. ಅರವಿಂದ ಕುಮಾರ್, ಕೆ ವಿ ಭಟ್ಯ ಮೂತ ಚೆಟ್ಟಿಯಾರ್, ಶಿವಪ್ರಸಾದ್ ಮೊದಲಾದವರು ಉಪಸ್ಥಿತರದ್ದರು.

Related posts

Leave a Reply

Your email address will not be published. Required fields are marked *