Header Ads
Breaking News

ಚೇಳೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಶಾಸಕ ಯು.ಟಿ. ಖಾದರ್ ಅವರಿಂದ ಉದ್ಘಾಟನೆ

ಉಳ್ಳಾಲ. ಬಂಟ್ವಾಳ ತಾಲೂಕಿನ ಚೇಳೂರು ತೋಮಸ್ ಚರ್ಚ್ ಮತ್ತು ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆ ಕಾಂಕ್ರೀಟಿಕರಣಗೊಂಡಿದ್ದು, ನೂತನ ರಸ್ತೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.ಚೇಳೂರು ತೋಮಸ್ ಚರ್ಚ್ ಮತ್ತು ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಯನ್ನು ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು 7ಕೋಟಿ ರೂ. ಅನುದಾನದಿಂದ ಚೇಳೂರನಿಂದ ನೇರವಾಗಿ ಇರಾ ಸಂಪರ್ಕ ರಸ್ತೆಗೆ ಕಾಮಗಾರಿಗೆ ಪ್ರಾರಂಭವಾಗಲಿದೆ. ಚೇಳೂರು ಪ್ರದೇಶ ನನ್ನ ವ್ಯಾಪ್ತಿಗೆ ಸೇರ್ಪಡೆಗೊಂಡ ನಂತರ ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದೇನೆ ಎಂದು ಹೇಳಿದರು. ಈ ಸಂದರ್ಭ ಗ್ರಾಮಸ್ಥರು ಶಾಸಕಾಂಗ ಯು.ಟಿ ಖಾದರ್ ರವರನ್ನು ಸನ್ಮಾನಿಸಿದರು.ತೋಮಸ್ ಚರ್ಚ್‍ನ ಧರ್ಮಗುರು ಫಾದರ್ ಮೈಕಲ್ ಡಿಸಿಲ್ವ, ಕಾಂಗ್ರೇಸ್ ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ, ತಾ.ಪಂ ಮಾಜಿ ಸದಸ್ಯ ಪ್ರವಿಣ್ ಅಳ್ವ, ಚೇಳೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹೆಂಡ್ರಿ ಡಿಸಿಲ್ವ, ಮಾಜಿ ಸದಸ್ಯೆ ಶಾಂತಿ ಜೋತಿ ಪಿಂಟೋ ಉಪಸ್ಥಿತರಿದರು.

Related posts

Leave a Reply

Your email address will not be published. Required fields are marked *