Header Ads
Breaking News

ಚೋಬಿಸಾಲ್ ವಾಟ್ಸಾಪ್ ಗ್ರೂಪ್ ಉಪ್ಪಳಗೇಟ್‌ನಿಂದ ನಡೆದ ವಿದ್ಯಾರ್ಥಿಗಳ ಆನ್‌ಲೈನ್ ಖುರಾನ್ ಸ್ಪರ್ಧೆ

ಮಂಜೇಶ್ವರ: ಚೋಬಿಸಾಲ್ ವಾಟ್ಸಾಪ್ ಗ್ರೂಪ್ ಉಪ್ಪಳ ಗೇಟ್ ವತಿಯಿಂದ ನಡೆದ ವಿದ್ಯಾರ್ಥಿಗಳ ಆನ್ ಲೈನ್‌ಖುರಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜಯಿಗಳಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪ್ಪಳ ಗೆಟ್ ಪರಿಸರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಟ್ರೋಫಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪ್ಪಳ ಕುನ್ನಿಲ್ ಮಸೀದಿ ಮುದರಿಸ್ ಹಮೀದ್ ಮದನಿ ಉಸ್ತಾದ್ ಹಾಗೂ ಉಪ್ಪಳ ಮಂಗಲ್ಪಾಡಿ ಗ್ರಾಮ ಪಂಚಾಯತಿನ ಎರಡನೇ ವಾರ್ಡು ಸದಸ್ಯ ಮೊಹಮ್ಮದ್ ಉಪ್ಪಳ ಗೇಟ್ ಎಂಬಿವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಅಬ್ದುಲ್ಲಾ ಪೊಯ್ಯ , ರವೂಫ್ , ಮೊಹಮ್ಮದ್ ಉಪ್ಪಳ ಗೇಟ್ , ಅಸ್ರಪ್ಹ್ ಬಾಗಿ, ಉಂಬಾಯಿ ದರ್ಬಾರ್ , ಅಬ್ದುಲ್ಲಾ ಕಪಾಟ್, ಜಬ್ಬಾರ್, ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *