Header Ads
Header Ads
Breaking News

ಜಗತ್ತಿನ ಅತಿ ದೊಡ್ಡ ಸಿರಿವಂತ, ಬಿಲ್ ಗೇಟ್ಸ್‌ರನ್ನು ಮೀರಿ ನಿಂತ ಜೆಫ್ ಬೆಜೋಸ್

ಆನ್ಲೈನ್ ರೀಟೇಲ್ ಕ್ಷೇತ್ರದ ದಿಗ್ಗಜ ಕಂಪೆನಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಮೈಕ್ರೊಸಾಫ್ಟ್ ಒಡೆಯ ಬಿಲ್ ಗೇಟ್ಸ್ರನ್ನು ಹಿಂದಿಕ್ಕಿ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗುರುವಾರ ಅಮೆಜಾನ್ನ ಷೇರುಗಳ ಬೆಲೆಯಲ್ಲಾದ ಏರಿಕೆಯಿಂದಾಗಿ ಜೆಫ್ ಈ ಸಾಧನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ಬೆಳಗ್ಗೆ ೯.೩೦ರ ವೇಳೆಗೆ ಅಮೆಜಾನ್ ಷೇರುಗಳ ಬೆಲೆಯಲ್ಲಿ ಶೇ. ೧.೮ರಷ್ಟು ಹೆಚ್ಚಳವಾಗಿ, ಒಂದು ಷೇರಿನ ಬೆಲೆ ೬೮,೭೨೪ ರೂ. ತಲುಪಿತ್ತು. ಈ ಏರಿಕೆಯ ನೆರವಿನಿಂದಾಗಿ ಜೆಫ್ ಬ್ಲೂಂಬರ್ಗ್ ಬಿಲೇನಿಯರ್ ಇಂಡೆಕ್ಸ್ನಲ್ಲಿ ಅಗ್ರ ಸ್ಥಾನ ಅಲಂಕರಿಸಿದರು. ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಬಿಲ್ ಗೇಟ್ಸ್ರನ್ನು ಜೆಫ್ ಹಿಂದಿಕ್ಕಿರುವುದು ಇದೇ ಮೊದಲು.

Related posts

Leave a Reply