Header Ads
Header Ads
Header Ads
Breaking News

ಜಗದೀಶ ಕಾರಂತರ ಮೇಲೆ ಕೇಸ್ ದಾಖಲು ಸ್ವಾಗತಾರ್ಹ ತಕ್ಷಣ ಬಂದಿಸಿ ಕಾನೂನು ಕ್ರಮಕೈಗೊಳ್ಳಿ ಪುತ್ತೂರಿನಲ್ಲಿ ದಸಂಸ ಆಗ್ರಹ

ಪುತ್ತೂರು: ಪೊಲೀಸ್ ಅಧಿಕಾರಿ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಹೊರಿಸಿ, ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಅವರ ವಿರುದ್ಧ ಪುತ್ತೂರು ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಅಲ್ಲಿಗೆ ನಿಲ್ಲಿಸಬಾರದು. ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಪುತ್ತೂರು ತಾಲೂಕು ಸಂಚಾಲಕ ಆನಂದ ಮಿತ್ತಬೈಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆಪ್ಟೆಂಬರ್ ೧೫ರಂದು ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಗ್ರಾಮಾಂತರ ಸಂಪ್ಯ ಠಾಣಾ ಎಸ್‌ಐ ಅಬ್ದುಲ್ ಖಾದರ್ ಅವರ ವಿರುದ್ಧ ಅವಹೇಳನಕಾರಿ ಶಬ್ದಗಳನ್ನು ಪ್ರಯೋಗಿಸಲಾಗಿದೆ. ವೃತ್ತಿ ಗೌರವಕ್ಕೆ ಧಕ್ಕೆ ತರುವಂಥ, ವೈಯಕ್ತಿಕ ನಿಂದನೆ ಮಾಡುವಂಥ, ಕೌಟುಂಬಿಕ ವಿಚಾರಗಳನ್ನು ಪ್ರಸ್ತಾಪಿಸಿ ಅವಹೇಳನ ಮಾಡಲಾಗಿದೆ. ಅವರು ಇಸ್ಲಾಂ ಧರ್ಮಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕೆ ಈ ಪ್ರತಿಭಟನೆ ಮಾಡಲಾಗಿದೆ ಎಂದು ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಕೊಂಬಾರು ಗ್ರಾಮ ಸಮಿತಿ ಸಂಚಾಲಕ ದಿನೇಶ್ ಬಿ., ತಾಲೂಕು ಸಮಿತಿ ಸದಸ್ಯೆ ಗೀತಾ ಪಿ.ಐ., ತಾಲೂಕು ಸಂಘಟನಾ ಸಂಚಾಲಕ ವಿಶ್ವನಾಥ ಪುಣ್ಚತ್ತಾರ್ ಉಪಸ್ಥಿತರಿದ್ದರು.

ವರದಿ: ಅನೀಶ್ ಪುತ್ತೂರು

Related posts

Leave a Reply