Header Ads
Breaking News

ಜಡಿ ಗಾಳಿಮಳೆಗೂ ಗಡಿ ಕಾಯುತ್ತಿರುವ ಉಡುಪಿ ಪೊಲೀಸರು : ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ

ಸುರಿಯುತ್ತಿರುವ ಜಡಿಮಳೆ ಒಂದು ಕಡೆಯಾದರೆ, ಬೀಸುತ್ತಿರುವ ಬಿರುಸಾದ ಗಾಳಿ ಮತ್ತೊಂದು ಕಡೆ…ಈ ಕಠಿಣ ಪರಿಸ್ಥಿತಿಯಲ್ಲೂ ಉಡುಪಿ ಗಡಿಕಾಯುವ ಪೊಲೀಸರು ಜಿಲ್ಲಾಡಳಿತದ ಆದೇಶ ಪಾಲಿಸಲು ಶ್ರಮಿಸುತ್ತಿದ್ದಾರೆ. ಅರ್ಥ ಮಾಡಿಕೊಳ್ಳದ ಜನ ಜಿಲ್ಲಾಡಳಿತದ ಆದೇಶವನ್ನೂ ಬ್ರೇಕ್ ಮಾಡಿ ತಮಗೆ ಗಡಿದಾಟಲು ಅವಕಾಶ ನೀಡಿ ಎಂಬುದಾಗಿ ಪೊಲೀಸರೊಂದಿಗೆ ಮಾತಿನ ಚಕಮಕಿಗಿಳಿದಿರುವುದು ಗಡಿಯಲ್ಲಿ ಕಂಡು ಬರುತ್ತಿದೆ. ಯಾವುದೇ ಖಾಸಗಿ ಕಂಪನಿಗಳಿಗೆ, ವ್ಯಾಪಾರಿಗಳಿಗೆ ತುರ್ತು ಪರಿಸ್ಥಿತಿಯ ಹೊರತಾಗಿ ಗಡಿದಾಟಲು ಅವಕಾಶವಿಲ್ಲದಿದ್ದರೂ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಪೊಲೀಸರೊಂದಿಗೆ ಮಾತಿಗಿಳಿದು ಪೊಲೀಸರ ಸಹನೆ ಪರೀಕ್ಷಿಸುತ್ತಿರುವುದು ಜನರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ.

Related posts

Leave a Reply

Your email address will not be published. Required fields are marked *