Header Ads
Breaking News

ಜನತೆಯಲ್ಲಿ ಆತಂಕ ಮೂಡಿಸಿದ ಕೊರೊನಾ ವೈರಸ್ : ಗಡಿ ಪ್ರದೇಶ ತಲಪಾಡಿಯಲ್ಲಿ ಬಿಗಿ ತಪಾಸಣೆ

ಮಂಜೇಶ್ವರ: ಜಗತ್ತಿನಾಧ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ನಾಡನ್ನೇ ನಡುಗಿಸುತಿದ್ದರೂ ಕರ್ನಾಟಕ ಕೇರಳ ಗಡಿ ಪ್ರದೇಶಗಳಲ್ಲಿ ಇದರ ಬಗ್ಗೆ ಕಿಂಚತ್ತೂ ಎಚ್ಚರವನ್ನು ಪಾಲಿಸದೇ ಇರುವುದು ಕಾಸರಗೋಡು ಜಿಲ್ಲೆಯ ಜನತೆಯಲ್ಲಿ ಆತಂಕವನ್ನು ಉಂಟು ಮಾಡಿದೆ.

ಗಡಿ ಪ್ರದೇಶವಾದ ತಲಪಾಡಿಯಲ್ಲಿ ಕೇರಳಕ್ಕೆ ಪ್ರವೇಶಿಸುವ ಪ್ರತೀ ವಾಹನಗಳನ್ನು ಕೇರಳ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ರು ಜಂಠಿಯಾಗಿ ತಪಾಸಣೆ ನಡೆಸಿ ಕೊರೋನಾ ದ ಬಗ್ಗೆ ಏನಾದರೂ ಶಂಕೆಗಳಿದ್ದರೆ ಆಸ್ಪತ್ರೆಗೆ ಸಾಗಿಸಿ ತಪಾಸಣೆ ನಡೆಸಿ ಖಚಿತ ಪಡಿಸಿ ಜಿಲ್ಲೆಯನ್ನು ಕೊರೋನಾ ಮುಕ್ತ ವನ್ನಾಗಿ ಮಾಡಲು ಹರ ಸಾಹಸ ಪಡುತಿದ್ದಾರೆ. ಆದರೆ ಈ ಮಧ್ಯೆ ಮಂಗಳೂರು ವಿಮಾನ ನಿಲ್ದಾಣಗಳಿಂದ ಆಗಮಿಸುವ ಯಾತ್ರಿಕರು ತಪಾಸಣಾ ಕೇಂದ್ರವನ್ನು ತಪ್ಪಿಸಿ ಅಡ್ದದಾರಿಗಳನ್ನು ಹಿಡಿದು ಕುಂಜತ್ತೂರು ಮಾರ್ಗವಾಗಿ ಬಂದು ರಾಷ್ಟ್ರೀಯ ಹೆದ್ದಾರಿಯನ್ನು ಸೇರುತಿದ್ದಾರೆಂಬ ಮಾಹಿತಿ ಪೊಲೀಸ್ ರಿಗೆ ಲಭಿಸಿದೆ. ಇಂತಹ ವರ್ತನೆಗಳು ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ.

ಜಗತ್ತೇ ಎಚ್ಚೆತ್ತುಕೊಂಡು ಜಾಗ್ರತೆಯನ್ನು ಪಾಲಿಸುತ್ತಾ ಇದ್ದರೆ ಗಡಿ ಪ್ರದೇಶದಲ್ಲಿ ಇನ್ನೂ ಯಾವುದಕ್ಕೂ ಕಡಿವಾಣವಾಗದೇ ಇರುವುದು ವಿಪರ್ಯಾಸವೆಂದೇ ಹೇಳದೆ ನಿರ್ವಾಹವಿಲ್ಲ. ಗಡಿ ಪ್ರದೇಶದಲ್ಲಿ ಗುಂಪು ಕೂಡಿ ಆಟವಾಡುವುದು ನಿತ್ಯ ದರ್ಶನವಾಗಿದೆ. ಸಮಾರಂಭಗಳಿಗೂ ಯಾವುದೇ ಕಡಿವಾಣವಾಗಲಿಲ್ಲ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸದೇ ಇದ್ದರೆ ಗಡಿ ಪ್ರದೇಶದಿಂದ ಕೊರೋನಾ ಸೋಂಕು ಜಿಲ್ಲೆಗೆ ವ್ಯಾಪಿಸುವ ಸಾಧ್ಯತೆ ಇದೆ.

Related posts

Leave a Reply

Your email address will not be published. Required fields are marked *