Header Ads
Breaking News

ಜನತೆ ಮನಸ್ಸು ಮಾಡಿದ್ರೆ ನಾನು ಗೆಲ್ತೇನೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ ಶೆಣೈ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜನತೆ ಮನಸ್ಸು ಮಾಡಿದ್ರೆ ನಾನು ಬಹುಮತದಿಂದ ಗೆಲ್ತೇನೆ ಎಂದು ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದ್ದಾರೆ. ಉಡುಪಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಜ್ರದ ಚಿಹ್ನೆಯಡಿ ಸ್ಪರ್ಧಿಸುತ್ತಿರುವ ಅಮೃತ್ ಶೆಣೈ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ್ರು. ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸಿದ ನನಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲವಾದಾಗ ಮನಸ್ಸಿಗೆ ಬೇಸರವಾಗಿ ಬಹುಜನರ ಅಪೇಕ್ಷೆ ಮೇರೆಗೆರ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಎಐಸಿಸಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿಲ್ಲ. ಪಕ್ಷ ವಿರೋಧ ಚಟುವಟಿಕೆ ಮಾಡಿದ್ದೇನೆ ಅಂತ ನಿಜವಾಗಿ ನನಗೆ ಅನಿಸಿದ್ದಲ್ಲಿ ರಾಜಿನಾಮೆ ನೀಡ್ತೇನೆ. ನಾನು ಕಾಂಗ್ರೆಸ್ ಬಂಡಾಯ ಅಲ್ಲ ನಾನು ಜೆಡಿಎಸ್ ಪಕ್ಷಕ್ಕೆ ಬಂಡಾಯ ಅಬ್ಯರ್ಥಿ. ಹಾಗಾಗಿ ನನಗೆ ಚಿಕ್ಕಮಗಳೂರು ಹಾಗೂ ಉಡುಪಿ ಭಾಗದಲ್ಲಿ ಹೆಚ್ಚಿನ ಫಾಲೋವರ್ಸ್ ಇದಾರೆ ಹಾಗಾಗಿ ಹೆಚ್ಚಿನ ಮತ ನನಗೆ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Related posts

Leave a Reply

Your email address will not be published. Required fields are marked *