Breaking News

ಜನಪ್ರತಿನಿಧಿಗಳ ನಿರ್ಲ್ಯಕ್ಷಕ್ಕೆ ಬೇಸೆತ್ತು ಊರಿನವರಿಂದಲೇ ರಸ್ತೆ ನಿರ್ಮಾಣ

ಮಂಜೇಶ್ವರ: ಹಲವಾರು ವರ್ಷಗಳಿಂದ ನಿರಂತರವಾಗಿ ಬೇಡಿಕೆಗೆ ಯಾವುದೇ ಬೆಲೆಯನ್ನು ಕಲ್ಪಿಸದೇ ನಿರ್ಲ್ಯಕ್ಷಕ್ಕೊಳಗಾಗಿರುವ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ ಅಂಬಿತ್ತಡಿಯ ಜನರು ಇದೀಗ ಊರವರೇ ಒಟ್ಟು ಸೇರಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಇಲ್ಲಿಗೊಂದು ರಸ್ತೆ ಮಾಡಿ ಕೊಡಿ ಎಂಬುದಾಗಿ ಶಾಸಕರಿಗೆ ಹಾಗೂ ಗ್ರಾ. ಪಂ. ಅಧಿಕೃತರಿಗೆ ಮನವಿ ಸಲ್ಲಿಸಿ ಯಾವುದೇ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆಯಲ್ಲಿ ಇದೀಗ ಊರವರೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ ಏಳಣೆ ವಾರ್ಡಿನಲ್ಲಿರುವ ಈ ಪ್ರದೇಶದ ಜನತೆ ಕಾಲ್ನಡಿಗೆಯಿಂದಲೇ ಮುಖ್ಯ ರಸ್ತೆಯನ್ನು ತಲುಪಬೇಕಾಗಿದೆ.  ಮಳೆಗಾಲ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಕಟ್ಟಪುಣಿಗಳಲ್ಲಿ ನೀರು ತುಂಬಿ ನೀರಿನಲ್ಲೇ ಸಂಚರಿಸಬೇಕಾದ ದುಸ್ಥಿತಿ ಬಂದೊದಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಶಾಲಾ ವಿದ್ಯಾರ್ಥಿಗಳು ಅಪಾಯದಂಚಿನಲ್ಲಿ ಸಿಲುಕಿದ್ದಾರೆ. ಶಾಲೆ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇದೀಗ ಊರವರೇ ಗಂಡಸರು ಮಹಿಳೆಯರು ಒಟ್ಟಾಗಿ ಕಲ್ಲು ಹಾಗೂ ಮಣ್ಣುಗಳನ್ನು ತುಂಬಿಸಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.. ಅನಾಹುತಗಳು ಸಂಭವಿಸುವ ಮೊದಲು ತಾತ್ಕಾಲಿಕ ಪರಿಹಾರವನ್ನು ಮಾಡಿದ್ದರೆ ಇಂದು ಅಂಬಿತ್ತಡ್ಯ ಜನತೆ ಮಲಗಾಲದಲ್ಲಿ ತುಂಬುವ ನೀರಿನಿಂದ ಹೆದರುವ ಅಗತ್ಯವಿರಲಿಲ್ಲ.  ಮತ ಯಾಚನೆಗಾಗಿ ಹಲವಾರು ಭರವಸೆಗಳನ್ನು ನೀಡುತ್ತಿರುವ ಜನಪ್ರತಿನಿಧಿಗಳು ಚುನಾಯಿತರಾದ ಬಳಿಕ ಕಚೇರಿಯ ಕುರ್ಚಿಯಲ್ಲೇ ಆಸೀನರಾಗಿದ್ದಾರೆಂಬುದಾಗಿ ಊರವರು ಹೇಳುತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿಯಾರೇ ಎಂಬುದನ್ನು ಕಾದು ನೋಡಬೇಕಾಗಿದೆ.

Related posts

Leave a Reply