Header Ads
Header Ads
Breaking News

ಜನಮಾನಸದಿಂದ ದೂರವಾಗುತ್ತಿರುವ ಮಕ್ಕಳ ಆಟಕ್ಕೆ ಮರು ಜೀವ

ಜನಮಾನಸದಿಂದ ಮರೆಯಾಗುತ್ತಿರುವ ಹಳೆಯ ಮಕ್ಕಳ ಆಟಕ್ಕೆ ಮರುಜೀವ. ವಾಟ್ಸಪ್ ಫೇಸ್ ಬುಕ್ ಮೊಬೈಲ್ ಇಲ್ಲದ ಕಾಲದಲ್ಲಿ ಮಕ್ಕಳಿಗೆ ಮುದನೀಡುತ್ತಿದ್ದ ಪರಂಪರೆಯ ಮಕ್ಕಳಾಟದ ಮರುಸೃಷ್ಠಿ .ಇದಕ್ಕೆ ಸಾಕ್ಷಿಯಾಗಿದ್ದು ಉಡುಪಿಯಲ್ಲಿ ನಡೆದ ಮದಿರೆಂಗಿ ರಂಗ್ ಎಂಬ ವಿಶಿಷ್ಟ ಕಾರ್ಯಕ್ರಮ. ಹೊಸ ತಲೆಮಾರಿನ ಮಕ್ಕಳಿಗೆ ತುಳುನಾಡಿನ ಸೊಬಗನ್ನು ಪರಿಚಯಿಸುವ ನೆಲದ ಆಟಗಳು, ಮಕ್ಕಳನ್ನು ಮುದಗೊಳಿಸಿದ್ದು ಹೇಗೆ ಗೊತ್ತಾ? ಈ ಸ್ಟೋರಿ ನೋಡಿ.ಜಗತ್ತಿನ ಎಲ್ಲಾ ಸೌಂದರ್ವನ್ನೂ ಮುಷ್ಟಿಯೊಳಗೆ ಹಿಡಿಯೋದು ಹೇಗೆ ಗೊತ್ತಾ? ಇಲ್ನೋಡಿ ಈ ಪುಟ್ಟ ಮಕ್ಕಳ ಕೈಯ್ಯಲ್ಲಿ ಚೆಲುವಿನ ಚಿತ್ತಾರವೇ ಅರಳಿದೆ.

ಮದರಂಗಿಯ ರಂಗಿನಾಟದಲ್ಲಿ ಸಂಭ್ರಮಿಸುತ್ತಿರುವ ಈ ಅಪರೂಪದ ಅವಕಾಶ ನೀಡಿದ್ದು, ಉಡುಪಿಯ ತುಳುಕೂಟ. ಹೊಸ ತಲೆಮಾರಿನ ಮಕ್ಕಳಿಗೆ ತುಳು ನೆಲದ ಸಂಸ್ಕೃತಿಯನ್ನು ಪರಿಚಯಿಸುವ ಅಪರೂಪದ ಕಾರ್ಯಕ್ರಮವ ಇದು. ಇಲ್ಲಿ ನಾನಾ ಬಗೆಯ ಮದರಂಗಿ ಇಟ್ಟು ಮಕ್ಕಳು, ಮಹಿಳೆಯರು ಮಾತ್ರವಲ್ಲ ಯುವಕರು ಕೂಡಾ ಖುಷಿಪಟ್ಟರು. ಮುದು ನೀಡುವ ಮದರಂಗಿ ಅಂಗೈಯ್ಯಲ್ಲಿ ಕಲಾ ಜಗತ್ತನ್ನೇ ತೋರಿಸಿತು.

ತುಳು ನಾಡಿನ ಹಳೇ ಮಾದರಿಯ ಕಲಾತ್ಮಕ ಚಿತ್ರಗಳನ್ನು ಮದರಂಗಿಯಲ್ಲಿ ಅಚ್ಚು ಹಾಕಿ ಮಕ್ಕಳು ಅಚ್ಚರಿಪಟ್ಟರು.ಕೇವಲ ಎಲೆಯಿಂದಲೇ ನಾದ ಹೊಮ್ಮಿಸುವ ತುಳುನಾಡಿನ ಹಳೇ ಆಟ ಇಲ್ಲಿ ಮತ್ತೆ ಜೀವ ಪಡೆಯಿತು. ಮಕ್ಕಳು ಎಲೆಯಲ್ಲೇ ತಯಾರಿಸಿದ ವಾದ್ಯವೃಂದದಲ್ಲಿ ನಾದ ಹೊಮ್ಮಿಸಿ ನಲಿದಾಡಿದರು. ಹಲಸಿನ ಹಣ್ಣಿನ ಬೀಜ ಅಂದ್ರೆ ತುಳು ಜನರಿಗೆ ತುಂಭಾ ಇಷ್ಟದ ಖಾದ್ಯ. ಬೆಂದ ಹಲಸಿನ ಬೀಜದ ಸಿಪ್ಪೆ ಬಿಡಿಸೋದು ಇಲ್ಲಿನ ಜನಪದ ಆಟ, ಈ ಸಿಪ್ಪೆ ಬಿಡಿಸುವ ಪೈಪೋಟಿ ನೋಡುಗರಿಗೆ ಖುಷಿಕೊಟ್ಟಿತು.

ಮಾರುಕಟ್ಟೆಗೆ ಹೊರತಾಗಿ ಕರಾವಳಿ ಭಾಗದಲ್ಲಿ ಬೆಳೆಯುವ ಅಪರೂದ ದೇಸೀ ಹೂವುಗಳ ಜೋಡಣೆ ಮಾಡಿದ ಕಲಾವಿದರು ಹೂವಿನ ರಂಗವಲ್ಲಿ ಹಾಕಿದರು. ಹೆಣ್ಮಕ್ಕಳಿಗೆ ತಲೆಗೂದಲು ಜೋಡಿಸಿ ಜಡೆ ಕಟ್ಟುವ ಸ್ಪರ್ಧೆಯೂ ಇತ್ತು. ಇಂತಹಾ ಅಪರೂಪದ ಆಟಗಳು ಇಲ್ಲಿಗೆ ಬಂದವರನ್ನು ಮುದಗೊಳಿಸಿದ್ದು ಸುಳ್ಳಲ್ಲ.ಕನ್ನಡ ನೆಲದಲ್ಲಿ ಅರಳಿದ ತುಳು ಸಂಸ್ಕೃತಿಗೆ ತನ್ನದೇ ಒಂದು ವೈವಿದ್ಯತೆ ಇದೆ. ನವಯುಗಕ್ಕೆ ಜನಪದವನ್ನು ಪರಿಚಯಿಸುವ ಈ ಕಾರ್ಯಕ್ರಮ ತುಳು ಭಾಷಿಗರನ್ನು ಸಂತೋಷ್ ಗೊಳಿಸಿತು. ಭಾಷೆ ,ಸಂಸ್ಕ್ರತಿಯನ್ನು ಉಳಿಸುವುದಕ್ಕೆ ಈ ರೀತಿ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

Related posts

Leave a Reply