Header Ads
Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ : ಜನಮೆಚ್ಚುಗೆ ಪಡೆದ ಮಣ್ಣಿನ ವಸ್ತುಗಳು

ಲಕ್ಷದೀಪೋತ್ಸವದ ಪ್ರಯುಕ್ತಏರ್ಪಾಡಾಗಿರುವ ವಸ್ತುಪ್ರದರ್ಶನ ಮಳಿಗೆಯಲ್ಲಿ ಮಣ್ಣಿನಿಂದಸಿದ್ಧಪಡಿಸಿದ ವಿವಿಧಆಕಾರದ ಮಡಿಕೆಗಳು, ಮತ್ತಿತರವಸ್ತುಗಳುಜನಮೆಚ್ಚುಗೆ ಪಡೆದವು.ಈ ಮಡಿಕೆಗಳು ಪರಿಸರ ಸ್ನೇಹಿ ಮೌಲ್ಯವನ್ನುಎತ್ತಿ ಹಿಡಿದವು. ದೀಪೋತ್ಸವದಲ್ಲಿ ಮಣ್ಣಿನ ವಸ್ತುಗಳ ಬೇಡಿಕೆ ಹೆಚ್ಚಾಗಿತ್ತು. ದಿನದಿಂದ ದಿನಕ್ಕೆ ಜನರನ್ನುತನ್ನತ್ತ ಸೆಳೆದವು.ಮೂಲತಃ ಧರ್ಮಸ್ಥಳ ಸಮೀಪವಿರುವಕೊಕ್ಕಡ ಬಳಿಯಕಾಯರ್ತಡ್ಕಎಂಬ ಒಂದು ಹಳ್ಳಿಯವರಾದ ಕೇಶವ್‌ಕುಮಾರ್‌ಇವರು ವಂಶ ಪಾರಂಪರ್ಯವಾಗಿ ನಡೆಸಿಕೊಂಡು ಬಂದಕುಂಬಾರವೃತ್ತಿ ಮುಂದುವರೆಸಿಕೊಂಡು ಬಂದಿದ್ದಾರೆ. ವಿವಿಧಆಕಾರದ ಮಣ್ಣಿನ ವಸ್ತುಗಳನ್ನು ತಯಾರಿಸುವುದೇಇವರ ಮೂಲ ಉದ್ಯೋಗವಾಗಿದೆ.
ಧರ್ಮಸ್ಥಳದ ಸಮೀಪವಿರುವ ದಿಡುಪೆ ಬಳಿ ಗದ್ದೆಯಲ್ಲಿಸಿಗುವ ಜೇಡಿ ಮಣ್ಣನ್ನುತೆಗೆದುಕೊಂಡು ಬಂದು, ಆ ಮಣ್ಣನ್ನು ಒಣಗಿಸಿ ಪುಡಿ ಮಾಡಿದ ನಂತರಅದನ್ನುಚಿಕ್ಕ-ಪುಟ್ಟ ಕಲ್ಲುಗಳೂ ಸಹ ಇಲ್ಲದಂತೆ ಸೋಸಿ, ನೀರನ್ನು ಹಾಕಿ ಹದಕ್ಕೆ ಬರುವವರೆಗೂಚೆನ್ನಾಗಿ ಕಲಿಸಬೇಕು. ಎತ್ತಿನಚಕ್ರವನ್ನು ಬಳಸಿಕೊಂಡು ಮಿಶ್ರಿತಗೊಂಡ ಮಣ್ಣನ್ನುಗ್ರಾಹಕರ ಬೇಡಿಕೆಗೆತಕ್ಕಂತೆ ಬಗೆ-ಬಗೆಯ ಮಡಿಕೆಗಳನ್ನು, ಮಣ್ಣಿನ ವಸ್ತುಗಳನ್ನು ತಯಾರಿಸಿಎರಡರಿಂದ ಮೂರು ದಿನಗಳ ಕಾಲ ನೀರಿನ ಅಂಶವಿಲ್ಲದಂತೆಚೆನ್ನಾಗಿ ಒಣಗಿಸಿ ನಂತರ ಹದಕ್ಕೆತಕ್ಕಷ್ಟುಬಿಸಿಯಲ್ಲಿ ಸುಡಲಾಗುತ್ತದೆ.
ಮೊದಲುಅಡುಗೆ ಪಾತ್ರೆಗಳು, ಊಟ ಮಾಡುವ ಮತ್ತು ಪಾತ್ರೆಗಳಿಗೆ ಮುಚ್ಚುವ ತಟ್ಟೆಗಳನ್ನು, ನೀರನ್ನು ಸಂಗ್ರಹಿಸಲು ಮಡಿಕೆಗಳನ್ನು ಮುಂತಾದದೈನಂದಿಕಜೀವನಕ್ಕೆ ಬಳಸುವ ವಸ್ತುಗಳನ್ನು ಮಾತ್ರಉಪಯೋಗಿಸುತ್ತಿದ್ದರು. ಆದರೆಇಂದು ಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ಆಡಂಬರಕ್ಕೆತಂದು ಮನೆಯಲ್ಲಿಶೋಕೇಸ್‌ನಲ್ಲಿಇಟ್ಟುಕೊಳ್ಳುತ್ತಾರೆ.
ವಿವಿಧಗಾತ್ರದ ಮಡಿಕೆಗಳು, ಮ್ಯಾಜಿಕ್ ಹೂಜಿಗಳು, ಆನೆ, ಕುದುರೆ, ಗೂಡು ದೀಪಗಳು, ವಸ್ತು ದೀಪಗಳು,ಕ್ಯಾಂಡಲ್ ಸ್ಯ್ಟಾಂಡ್, ಹಕ್ಕಿ ಗೂಡುಗಳು, ಹಕ್ಕಿಗಳಿಗೆ ಮತ್ತು ಕೋಳಿಗಳಿಗೆ ಕಾಳು ಮತ್ತು ನೀರು ಹಾಕುವ ಬಟ್ಟಲುಗಳು, ದೊಡ್ಡ-ದೊಡ್ಡ ವಾಜುಗಳು, ಧೂಪದ ಬಟ್ಟಲು, ಹೂ ಕುಂಡಗಳು, ಹಣತೆ ಸೇರಿದಂತೆ ಅನೇಕ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಾರೆ.  ಕೇಶವ್‌ಕುಮಾರ್‌ಅವರುತಯಾರಿಸುವ ವಸ್ತುಗಳನ್ನು ಧರ್ಮಸ್ಥಳದಲ್ಲಿ ನಡೆಯುವ ಮೇಳಗಳಲ್ಲಿ,ಸುತ್ತಮುತ್ತ ನಡೆಯುವ ಜಾತ್ರೆಗಳಲ್ಲಿ, ಮಂಗಳೂರಿನ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.

Related posts

Leave a Reply

Your email address will not be published. Required fields are marked *