Header Ads
Header Ads
Breaking News

ಜನರ ಸಮಸ್ಯೆಗಳ ಪರಿಹರಿಸುವಲ್ಲಿ ನಗರಾಡಳಿತ ಸಂಪೂರ್ಣ ನಿಷ್ಕ್ರೀಯ: ಕೆ.ಎಸ್. ಉಮ್ಮರ್ ಆರೋಪ

ಸುಳ್ಯ ನಗರ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಿಂದ ಜನರು ರೋಸಿಹೋಗಿದ್ದಾರೆ. ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿದೆ. ನಗರದ ಕೆಲವು ವಾರ್ಡ್‌ಗಳಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಗರದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಡಳಿತ ಪಕ್ಷ ಮತ್ತು ಅಧಿಕಾರಿ ಸಂಪೂರ್ಣ ನಿಷ್ಕ್ರೀಯವಾಗಿ ಭ್ರಷ್ಟಾಚಾರದ ಪರವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಎಸ್‌ಡಿಪಿಐ ಸದಸ್ಯ ಕೆ.ಎಸ್. ಉಮ್ಮರ್ ಆರೋಪಿಸಿದ್ದಾರೆ.ಅವರು ಸುಳ್ಯ ಮೂಲಕ ನಾರ್ಕೋಡು-ಕೇರಳಕ್ಕೆ ಸಂಪರ್ಕಕಿಸುವ ಅಂತಾರಾಜ್ಯ ರಸ್ತೆಯ ನಗರದ ಗುರುಂಪು ರಸ್ತೆ ಸರಿಪಡಿಸಲು ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿ ನಗರ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಸಾರ್ವಜನಿಕರ ಕಣ್ಣಿಗೆ ಕಾಣುತ್ತಿದ್ದರು ನಗರಾಡಳಿತ ಅದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ವಿರೋದ ಪಕ್ಷ ಕೂಡ ನಿಷ್ಕ್ರೀಯವಾಗಿದೆ.

ನಗರದ ಸಮಸ್ಯೆಗಳ ಬಗ್ಗೆ ಕಳೆದ5 ತಿಂಗಳಿನಿಂದ ನಗರ ಪಂಚಾಯತ್‌ಗೆ ಮನವಿ ಸಲ್ಲಿಸುತ್ತ ಬಂದರೂ ಇಲ್ಲಿಯವರೆಗೆ ಅದನ್ನು ಸರಿಪಡಿಸುವ ಕೆಲಸ ಆರಂಭ ಮಾಡಿಲ್ಲ. ನಗರ ಪಂಚಾಯತ್‌ನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಆiಕಾರಿಗಳು ಕೂಡ ಶಾಮೀಲಾಗುತ್ತಿದ್ದಾರೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡು ನಿಷ್ಕ್ಡೀಯವಾಗಿದೆ. ವಿರೋಧ ಪಕ್ಷದ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷ ಕೂಡ ಮರೆತು ಕೆಲಸ ಮಾಡುತ್ತಿದೆ. ಇದಕ್ಕಾಗಿ ಜನರ ಸಮಸ್ಯೆಗಳ ವಿವಾರಣೆಗಾಗಿ ಎಸ್‌ಡಿಪಿಐ ಪಕ್ಷ ಹೋರಾಟಕ್ಕೆ ಇಳಿದಿದೆ ಎಂದು ಹೇಳಿದರು. ಎಸ್‌ಡಿಪಿಐ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ರಫೀಕ್ ಎಂ.ಎ ಮಾತನಾಡಿ ಸುಳ್ಯ ನಗರ ಪಂಚಾಯತ್ ಹಲವು ಯೋಜನೆಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಈಗಾಗಲೇ ಈ ಎಲ್ಲಾ ಅವ್ಯಹಾರಗಳನ್ನು ಕಾನೂನು ಮೂಲಕ ಹೋರಾಟಕ್ಕೆ ಎಸ್‌ಡಿಪಿಐ ಆರಂಭಿಸಿದೆ. ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲು ಆಗದ ನಗರಾಡಳಿತ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ಕುಡ ವಿಫಲವಾಗಿದ್ದಾರೆ.

ಮುಂದಿನ ದಿನಗಳಲ್ಲಿ ಅವರ ವಿರುದ್ದವೂ ಕಾನೂನು ಹೋರಾಟ ನಡೆಯಲಿದೆ. ನಗರದಲ್ಲಿರುವ ವಿವಿಧ ಸಮಸ್ಯೆಗಳಿಗೆ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ಸ್ಪಂಧಿಸಿ ಮುಂದಿನ 10 ದಿನಗಳಲ್ಲಿ ರಸ್ತೆ ಕೆಲಸ ಆರಂಭಿಸದಿದ್ದಲ್ಲಿ ನಗರ ಪಂಚಾಯತ್‌ನ ಮುಂಭಾಗದಲ್ಲಿ ಧರಣಿ ಕುಳಿತು ಸಮಸ್ಯೆಗೆ ಪರಿಹಾರ ಕಾಣುವವರೆಗೆ ಎಸ್‌ಡಿಪಿಐ ಹೋರಾಟ ಮಾಡಲಿದೆ ಎಂದರು. ಪ್ರತಿಭಟನೆ ಸ್ಥಳಕ್ಕೆ ಬಂದ ನ.ಪಂ ಇಂಜಿನಿಯರ್ ಶಿವಕುಮಾರ್ ಅನುದಾನ ಕೊರತೆ ಹಾಗೂ ಈಗ ಇರುವ ಅನುದಾನದಲ್ಲಿ ಕೆಲಸ ಆರಂಭಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಸ್ತಫ ಎಂ.ಕೆ, ಅಬ್ದುಲ್ ಎಂ.ಪಿ ಎಸ್‌ಡಿಎಯು ಅಧ್ಯಕ್ಷ ಶಾಜೀ, ಮುಸ್ತಫ ಚೆಂಗಳ, ಕಬೀರ್ ಸುಳ್ಯ, ಲತೀಫ್, ಮುನೀರ್ ಕೆ, ಅಜೀಝ್ ಸಂಗಂ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply