Header Ads
Header Ads
Header Ads
Breaking News

ಜನವರಿ ಮೊದಲ ವಾರದಲ್ಲಿ ಸ್ವಚ್ಛ ಸರ್ವೇಕ್ಷಣೆ ಸ್ವಚ್ಛತಾ ಆಪ್ ಬಳಕೆ ಹೆಚ್ಚಿಸಿ- ಪಾಲಿಕೆ ಮೇಯರ್ ಕವಿತಾ ಸನಿಲ್

ಸ್ವಚ್ಚ ಸರ್ವೇಕ್ಷಣ 2018 ರಲ್ಲಿ ಮಂಗಳೂರು ನಗರ ಗರಿಷ್ಠ ಅಂಕ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ತಮ್ಮ ಮೊಬೈಲ್‌ಗಳಲ್ಲಿ ಸ್ವಚ್ಚತಾ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಮಂಗಳೂರು ಪಾಲಿಕೆ ಸಾರ್ವಜನಿರಿಗೆ ಮನವಿ ಮಾಡಿದೆ. ಮಂಗಳೂರಿನ ಪಾಲಿಕೆ ಸಭಾಂಗಣದಲ್ಲಿ ಸ್ವಚ್ಚ ಸರ್ವೇಕ್ಷಣೆ -2018 ರ ಭಿತ್ತಿಪತ್ರವನ್ನು ಮೇಯರ್ ಕವಿತಾ ಸನಿಲ್ ಬಿಡುಗಡೆಗೊಳಿಸಿದರು. ತದ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ಪಾಲಿಕೆ ಅಯುಕ್ತ ಮಹಮ್ಮದ್ ನಜೀರ್ ಮಾತನಾಡಿ, ತ್ಯಾಜ್ಯ ಸಂಗ್ರಹಣೆ, ನಗರದ ಸ್ವಚ್ಚತೆ , ಮನೆ ಮನೆ ಕಸ ಸಂಗ್ರಹಣೆ, ನಗರದಲ್ಲಿ ಸಮರ್ಪಕ ಶೌಚಾಲಯಗಳ ಲಭ್ಯತೆ , ನಗರದ ಸ್ವಚ್ಚತೆಯ ಕುರಿತು ನಾಗರಿಕರ ಕಳಕಳಿ ಸೇರಿದಂತೆ ನಾಗರಿಕರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ತ್ಯಾಜ್ಯ ಸಂಗ್ರಹಣೆ, ನೀರು ಪೂರೈಕೆ ಸೇರಿದಂತೆ ಯಾವುದೇ ಲೋಪವಾದಲ್ಲಿ ನಾಗರಿಕರು ಈ ಆಪ್ ಮೂಲಕ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.

ಶಾಸಕ ಜೆ.ಆರ್.ಲೋಬೋ ಮಾತನಾಡಿ, ಎಲ್ಲಾ 60 ವಾರ್ಡ್‌ಗಳಲ್ಲಿ ಜನವರಿ 16 ರಿಂದ ಕಸ ವಿಂಗಡನೆ ಆರಂಭವಾಗಲಿದ್ದು, ನಾಗರಿಕರು ಮನೆಯಿಂದಲೇ ಹಸಿ ಕಸ, ಒಣಕಸ ಬೇರ್ಪಡಬೇಕೆಂದರು.ಈ ವೇಳೆ ರಾಮಕೃಷ್ಣ ಮಿಷನ್‌ನ ಪ್ರತಿನಿಧಿ ರಾಮಕೃಷ್ಣ , ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಮೊದಲಾದವರು ಉಪಸ್ಥತರಿದ್ದರು.

Related posts

Leave a Reply