Header Ads
Header Ads
Breaking News

ಜನವರಿ 1ರಿಂದ 12ರ ವರೆಗೆ ಕಡಂಬಾರ್ ವಲಿಯುಲ್ಲಾಹಿ ಹಾಜಿಯಾರ್ ಮಖಾಂ ಉರೂಸ್

ಮಂಜೇಶ್ವರ : ಇತಿಹಾಸ ಪ್ರಸಿದ್ಧ ಕಡಂಬಾರ್ ವಲಿಯುಲ್ಲಾಹಿ ಹಾಜಿಯಾರ್ ಉಪ್ಪಾಪ ಉರೂಸ್ ಸಮಾರಂಭವು ಜನವರಿ 1ರಿಂದ 12ರ ವರೆಗೆ ನಡೆಯಲಿದೆಯೆಂದು ಉರೂಸ್ ಜಮಾಅತ್ ಸಮಿತಿ ಪದಾಧಿಕಾರಿಗಳಲ್ಲೋಬ್ಬರಾದ ಎಕೆಎಂ ಅಶ್ರಫ್ ಮಂಜೇಶ್ವರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮಂಜೇಶ್ವರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನವರಿ 13ರ ಭಾನುವಾರ ಹಗಲು ಉರೂಸ್ ನೇರ್ಚೆ ನಡೆಯಲಿದೆ. ಜನವರಿ 1ರಂದು ಮಂಗಳವಾರ ಸಂಜೆ ನಡೆಯುವ ಮಖಾಂ ಝಿಯಾರತ್ ಹಾಗೂ ದ್ವಜಾರೋಹಣಕ್ಕೆ ಸಯ್ಯದ್ ಅತ್ತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವ ನೀಡುವರು. ಬಳಿಕ ರಾತ್ರಿ 8.30 ಕ್ಕೆ ನಡೆಯುವ ಸಮಾರಂಭದಲ್ಲಿ ಸಯ್ಯದ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಧಾರ್ಮಿಕ ಪ್ರವಚನಕ್ಕೆ ಚಾಲನೆ ನೀಡುವರು. ಕಡಂಬಾರ್ ಮುದರ್ರಿಸ್ ಎಂ.ಪಿ ಮೊಹಮ್ಮದ್ ಸಅದಿ ಅಧ್ಯಕ್ಷತೆ ವಹಿಸುವರು. ಸಯ್ಯದ್ ಶಹೀರ್ ಅಲ್ ಬುಖಾರಿ ತಂಙಳ್ ಮಳ್‍ಹರ್ ಪ್ರಾರ್ಥನೆಗೆ ನೇತೃತ್ವ ನೀಡುವರು. ಅಬ್ದುಲ್ ಲತೀಫ್ ಸಅದಿ ಪಝಶ್ವಿ ಮುಖ್ಯ ಭಾಷಣ ಮಾಡುವರು. ವಿವಿಧ ದಿನಗಳಲ್ಲಾಗಿ ನಡೆಯುವ ಧಾರ್ಮಿಕ ಪ್ರವಚನದಲ್ಲಿ ಹಾಫಿಳ್ ಇ.ಪಿ ಅಬೂಬಕ್ಕರ್ ಅಲ್ ಖಾಸಿಮಿ, ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ಲು,. ಆಲಿಕ್ಕುಟ್ಟಿ ಮುಸ್ಲಿಯಾರ್, ಎ.ಎಂ ನೌಶಾದ್ ಬಾಖವಿ ಮೊದಲಾದವರು ಭಾಗವಹಿಸುವರು.

ಜನವರಿ 12 ರಂದು ರಾತ್ರಿ ನಡೆಯುವ ಸಮಾರೋಪ ಸಮಾರಂಭವನ್ನು ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ಅಧ್ಯಕ್ಷ ಖಾಝಿ ಜಿಫ್ರೀ ಮುತ್ತುಕ್ಕೋಯ ತಂಙಳ್ ಉದ್ಘಾಟಿಸುವರು. ಅನ್ವರ್ ಮುಹ್ಯುದ್ದೀನ್ ಹುದವಿ ಆಲುವ ಮುಖ್ಯ ಭಾಷಣ ಮಾಡುವರು. ಜನವರಿ 13 ರಂದು ಭಾನುವಾರ ಸುಬುಹಿ ನಮಾಜಿನ ಬಳಿಕ ನಡೆಯುವ ಖತಮುಲ್ ಕುರಾನ್ ಗೆ ಎಂ.ಪಿ ಮೊಹಮ್ಮದ್ ಸಅದಿ ನೇತೃತ್ವ ನೀಡುವರು. ಬೆಳಿಗ್ಗೆ 10 ಘಂಟೆಗೆ ನಡೆಯುವ ಮೌಲೀದ್ ಪಾರಾಯಣ ಕ್ಕೆ ಕೆ.ಎಸ್ ಅಲೀ ತಂಙಳ್ ಕುಂಬೋಲ್ ನೇತೃತ್ವ ನೀಡುವರು. ಅಬ್ದುಲ್ ಖಾದರ್ ಮುಸ್ಲಿಯಾರ್ ಕಾಸರಗೋಡು ಪ್ರಾರ್ಥನೆಗೆ ನೇತೃತ್ವ ನೀಡುವರು. ಬಳಿಕ ಅನ್ನದಾನ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಎಂ.ಪಿ ಮೊಹಮ್ಮದ್ ಸಅದಿ, ಅಬೂಬಕ್ಕರ್ ಹೊಸಮನೆ, ಇ.ಎನ್ ಅಬೂಬಕ್ಕರ್ ಹಾಜಿ ಗಾಂಧೀ ನಗರ, ಅಬ್ದುಲ್ ಅಝೀಝ್ ಬರ್ವಾ ಕಡಂಬಾರ್, ತಾಜುದ್ದೀನ್, ಜಾಸಿಂ ಅಲ್ ಬರಕ, ಮೊಯ್ದೀನ್ ಉಪಸ್ಥಿತರಿದ್ದರು.

Related posts

Leave a Reply