Header Ads
Header Ads
Breaking News

ಜನವರಿ 17ರಿಂದ 20ರ ವರೆಗೆ ಮಂಜೇಶ್ವರದಲ್ಲಿ ರಾಷ್ಟ್ರೀಯ ಯಕ್ಷ ರಂಗೋತ್ಸವ

ಮಂಜೇಶ್ವರ : ರಾಷ್ಟ್ರೀಯ ಯಕ್ಷ ರಂಗೋತ್ಸವ” ಕಾರ್ಯಕ್ರಮವು ರಂಗ ಚೇತನ ಸಂಸ್ಕøತಿ ಕೇಂದ್ರ, ಚೌಟರ ಪ್ರತಿಷ್ಠಾನ, ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಸಹಯೋಗದಲ್ಲಿ ಜನವರಿ 17 ರಿಂದ 20ರ ತನಕ ಮಂಜೇಶ್ವರ ಮೀಯಪದವಿನ ಚೌಟರ ಚಾವಡಿಯಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಮಂಜೇಶ್ವರ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜನವರಿ 17 ರಂದು ಸಂಜೆ 6.30ಕ್ಕೆ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೆಂಗಳೂರು ರಂಗ ಚೇತನ ಸಂಸ್ಕøತಿ ಕೇಂದ್ರದ ಅಧ್ಯಕ್ಷ ಡಿ.ಕೆ ಚೌಟ ಅಧ್ಯಕ್ಷತೆ ವಹಿಸಲಿರುವರು. ಮಾರುತಿ ಪ್ರತಾಪ ಯಕ್ಷಗಾನ ಪ್ರಸಂಗ ನಡೆಯಲಿದೆ. 18 ರಂದು ಸಂಜೆ 6.30 ಕ್ಕೆ ಕಾಸರಗೋಡು ಚಿನ್ನಾ, ದಾಮೋದರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗ ನಡೆಯಲಿದೆ. 19 ರಂದು ಸಂಜೆ 6.30ಕ್ಕೆ ಉಮೇಶ್ ಸಾಲ್ಯಾನ್ ,ಜಯರಾಮ ಮಂಜತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಗಿರಿಜಾ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಲಿದೆ. ಇನ್ನೂ 20ರಂದು ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ. ಎಂ ಪ್ರಭಾಕರ ಜೋಷಿ, ಡಾ. ಡಿ ಚಂದ್ರಶೇಖರ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಶ್ರೀ ದೇವಿ ಮಹಿಷ ಮರ್ಧಿನಿ ಯಕ್ಷಗಾನ ಪ್ರಸಂಗ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ಶ್ರೀಧರ ರಾವ್, ಡಾ. ಡಿ ಸಿ ಚೌಟ, ಡಾ.ಜಯಪ್ರಕಾಶ್ ನಾರಾಯಣ ಉಪಸ್ಥಿತರಿದ್ದರು.

Related posts

Leave a Reply