Header Ads
Header Ads
Breaking News

ಜನವರಿ 20ರಂದು ಆಹಾರೋತ್ಸವ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ

ಆಹಾರೋತ್ಸವ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ, ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವು ತಲಪಾಡಿಯ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಪುತ್ತೂರಿನ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಸಹಯೋಗದಲ್ಲಿ ನಗರದ ಕೊಡಿಯಾಲ್ ಬೈಲಿನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಜನವರಿ 20 ರಂದು ನಡೆಯಲಿದೆ.

ಈ ಬಗ್ಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊಫೆಸರ್ ಎಂ. ಬಿ. ಪುರಾಣಿಕ್ ಮಾತನಾಡಿ,
ಜನರು ಆರೋಗ್ಯಕ್ಕೆ ಪೂರಕವಾದಂತಹ ಆಹಾರ, ಆಹಾರ ಅಭ್ಯಾಸ ಮತ್ತು ಪ್ರಕೃತಿಯಲ್ಲಿ ಸಿಗುವಂತಹ ವಸ್ತುಗಳನ್ನೇ ನಾವು ಉಪಯೋಗ ಮಾಡಬೇಕು. ಇದರಿಂದ ಆಗುವಂತಹ ಲಾಭಗಳ ಜೊತೆಗೆ ನಮ್ಮ ಭಾರತೀಯ ಆಹಾರವನ್ನು ಸೇವಿಸುವ ದೃಷ್ಟಿಯಲ್ಲಿ ಸಾವಯವ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವ ವ್ಯವಸ್ಥೆ ಹಾಗೂ ಉಚಿತ ಆಯುರ್ವೇದ ಚಿಕಿತ್ಸೆಯ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು
ಡಾ ರಾಜೇಶ್ ಪಾದೆಕಲ್ಲು ಮಾತನಾಡಿ ಪ್ರಖ್ಯಾತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾದ ಉಡುಪಿಯ ಡಾ ಮಹಮ್ಮದ್ ರಫೀಕ್ ಅವರಿಂದ ನಿತ್ಯ ಜೀವನದಲ್ಲಿ ಆಹಾರ, ಯೋಗ ಚಿಕಿತ್ಸೆಯ ಮಹತ್ವ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.

ವೈದ್ಯಾಧಿಕಾರಿ ಡಾ. ರವಿ ಗಣೇಶ್ ಮಾತನಾಡಿ, ಆಹಾರ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಕೂಡ ಹಮ್ಮಿಕೊಂಡಿದ್ದೇವೆ ಇಲ್ಲಿ ಉಚಿತವಾಗಿ ಔಷಧಿಯನ್ನು ನೀಡುತ್ತೇವೆ.
ಈ ಕಾರ್ಯಕ್ರಮಕ್ಕೆ ಎಸ್ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಶ್ರೀನಿವಾಸ್ ಆಚಾರ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಹಾಗೂ ಪುತ್ತೂರಿನ ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಆರ್ ಸತೀಶ್‌ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊಫೆಸರ್ ಎಂಬಿ ಪುರಾಣಿಕ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಬಿಪಿನ್ ಚಂದ್ರ, ಧನ್‌ಪಾಲ್ ಕಟೀಲ್, ಉಪಸ್ಥಿತರಿದ್ದರು.

Related posts

Leave a Reply