Header Ads
Header Ads
Breaking News

ಜನವರಿ 23 ರಿಂದ 28ರವರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ ಮತ್ತು ಸಾನಿಧ್ಯ ಕಲಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜನವರಿ 23 ರಿಂದ 28 ರವರೆಗೆ ಅಷ್ಟಬಂಧ ಮತ್ತು ಸಾನಿಧ್ಯ ಕಲಶ ನಡೆಯಲಿದೆ. 2020ರಲ್ಲಿ ದೇವಳದಲ್ಲಿ ಬ್ರಹ್ಮಕಲಶ ನಡೆಯಲಿದ್ದು ಅದಕ್ಕಿಂತ ಮುಂಚಿತವಾಗಿ ಈ ಬಾರಿ ಅಗತ್ಯ ಕೆಲಸಕಾರ್ಯಗಳು ನಡೆಯುತ್ತಿದೆ ಎಂದು ಕಟೀಲು ದೇವಳದ ಮುಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಹೇಳಿದರು.

ಅವರು ಕಟೀಲು ದೇವಳದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, ಧ್ವಜಸ್ತಂಭ 2013 ರಂದು ದೇವಳಕ್ಕೆ ತಂದ ನಂತರ ದೀರ್ಘಬಾಳಿಕೆಗಾಗಿ ಎಳ್ಳೆಣ್ಣೆಯಲ್ಲಿ ಹಾಕಿ ಇಡಲಾಗಿದ್ದು ಇದೀಗ ಸ್ಥಾಪನೆಗೊಂಡಿದ್ದು ಜನವರಿ 25 ರಂದು ಪ್ರತಿಷ್ಟೆಗೊಳ್ಳಲಿದೆ. ದ್ವಜಸ್ತಂಭಕ್ಕೆ ತಾಮ್ರದ ಕೊಳವೆ ಹಾಕಿ ನಂತರ 8 ಕಿ.ಲೋ ಗಾಂ ಚಿನ್ನದಿಂದ ಲ್ಯಾಮೀನೆಶನ್ ಗೊಳ್ಳಲಿದೆ. ನೂತನ ಧ್ವಜಸ್ತಂಭ 42 ಅಡಿ ಉದ್ದ ಇದೆ. ಗಣಪತಿ ಗುಡಿಯ ಮುಂಭಾಗದಲ್ಲಿ ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಕಿಂಡಿಯನ್ನು ನಿರ್ಮಿಸಲಾಗಿದೆ ಎಂದರು.ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಜನವರಿ 23, 24, 25 26 ಮತ್ತು 27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, 28 ರಂದು ಬೆಳಿಗ್ಗೆ ಗಣಪತಿ ದೇವರಿಗೆ ದ್ರವ್ಯಕಲಶಾಭಿಷೇಕ, ಪೂರ್ವಾಹ್ನ 9.30 ಕ್ಕೆ ಕುಂಭಲಗ್ನದಲ್ಲಿ ಶ್ರೀ ದೇವರಿಗೆ ಕಲಶಾಭಿಷೇಕ ನವೀಕೃತ ಅಶ್ವಥಕಟ್ಟೆಯ ಸಮರ್ಪಣೆ ಮಹಾಪೂಜೆ ಪಲ್ಲಪೂಜೆ ಸಾಯಂಕಾಲ ಶ್ರೀ ದೇವರಿಗೆ ರಂಗಪೂಜೆ ಸುವರ್ಣ ರಥೋತ್ಸವ, ಮಂತ್ರಾಕ್ಷತೆ ಒಕುಳಿ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಬಿಪಿನ್ ಪ್ರಸಾದ್ ಕೊಡೆತ್ತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply