Header Ads
Header Ads
Breaking News

ಜನವರಿ 25ರಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಧ್ವಜಸ್ತಂಭದ ಪ್ರತಿಷ್ಟೆ.

ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭನ್ನು ಭಾನುವಾರ ಸ್ಥಾಪನೆ ಮಾಡಲಾಯಿತು. ಕುಂಭನ್ಯಾಸ, ಕೂರ್ಮನ್ಯಾಸ, ರತ್ನ ನ್ಯಾಸ ನಡೆದು ಸ್ಥಾಪನೆ ಜಾಗದಲ್ಲಿ ಚಿನ್ನ, ವಜ್ರ ವೈಡೂರ್ಯ ಹಾಕಿ ನಪುಂಸಕ ಶಿಲೆಯನ್ನು ಇಟ್ಟು ರತ್‌ನ್ಯಾಸ ಹೋಮ ಸ್ಥಾಪಿಸಲಾಯಿತು. ಈ ಸಂದರ್ಭ ದೇವಳದ ಮುಕ್ತೇಸರರು, ಅರ್ಚಕರು, ಮಾಗಂದಡಿ ಕುಟುಂಬಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.ಜನವರಿ 25 ರಂದು ಈ ಧ್ವಜಸ್ತಂಭದ ಪ್ರತಿಷ್ಟೆ ನಡೆಯಲಿದೆ. ಸುಮಾರು 42.50 ಅಡಿ ಉದ್ದದ ಸಾಗುನಾನಿ ಮರದ ಈ ಧ್ವಜಸ್ತಂಭ ಮತ್ತು ಸ್ಥಾಪನೆ ವೆಚ್ಚವನ್ನು ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಸೇವಾ ರೂಪದಲ್ಲಿ ನೀಡಿದ್ದಾರೆ. ದೇವಸ್ಥಾನದಲ್ಲಿರುವ 10 ಕಿಲೋ ಗ್ರಾಂ ಚಿನ್ನದ ಮೂಲಕ ಈ ಧ್ವಜಸ್ತಂಭಕ್ಕೆ ಚಿನ್ನದ ಲ್ಯಾಮಿನೇಶನ್ ನಡೆಯಲಿದೆ. ಇದಕ್ಕೆ ಸುಮಾರು ರೂ 3.40ಕೋಟಿ ವೆಚ್ಚವಾಗಲಿದೆ. ಚಿನ್ನದ ಅಳವಡಿಕೆ ಕೆಲಸಕ್ಕೆ ಸುಮಾರು 28 ಲಕ್ಷ ರೂಪಾಯಿ ಆಗಲಿದ್ದು, ಐವರು ಭಕ್ತರು ಈ ವೆಚ್ಚವನ್ನು ಭರಿಸಲಿದ್ದಾರೆ. ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವ ಒಳಗೆ ಚಿನ್ನದ ಅಳವಡಿಕೆ ಕರ್ಯ ನಡೆಯಲಿದೆ. ಈ ಧ್ವಜಸ್ತಂಭವನ್ನು 2013 ಡಿಸೆಂಬರ್5 ರಂದು ದೇವಳಕ್ಕೆ ಅರ್ಪಿಸಲಾಗಿದ್ದು ನಂತರ ಅದನ್ನು ಸುಮಾರು ನಾಲ್ಕು ವರ್ಷಗಳ ಕಾಲ ಎಳ್ಳೆಣ್ಣೆಯಲ್ಲಿ ಹಾಕಿ ಇಡಲಾಗಿತ್ತು.

Related posts

Leave a Reply