

ನವದೆಹಲಿ, ಜ. 17: ದೆಹಲಿ ಪೊಲೀಸ್ನ ತಕರಾರಿನ ನಡುವೆಯೂ ದೆಹಲಿ ಗಡಿಯಲ್ಲಿ ನೆರೆದಿರುವ ರೈತರು ತಮ್ಮ ಈ ಹಿಂದಿನ ನಿರ್ಧಾರದಂತೆ ಜನವರಿ 26ರ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದು ಖಚಿತವಾಗಿದೆ.
ಪರೇಡ್ ಅನ್ನು ಅತ್ಯಂತ ಶಾಂತಿಯುತವಾಗಿ ದೆಹಲಿ ಔಟರ್ ರಿಂಗ್ ರೋಡಿನಲ್ಲಿ ನಡೆಸಲಾಗುತ್ತದೆ ಎಂದು ರೈತ ಸಂಘಟನೆಗಳ ಒಕ್ಕೂಟ ತಿಳಿಸಿದೆ.ಪರೇಡ್ ಐತಿಹಾಸಿಕವಾದ ಘಟನೆಯಾಗಲಿದೆ ಎಂದು ರೈತ ಒಕ್ಕೂಟದ ಹೇಳಿಕೆ ತಿಳಿಸಿದೆ.