Header Ads
Breaking News

ಜನವರಿ 31ರಂದು ಪಲ್ಸ್ ಪೋಲೀಯೋ ಕಾರ್ಯಕ್ರಮ

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜನವರಿ 31ರಂದು ಹಮ್ಮಿಕೊಳ್ಳಲಾಗಿದೆ.ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೆ ಲಸಿಕೆ ಹಾಕಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ ಹೇಳಿದರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪೊಲೀಯೋವನ್ನು ಕೊನೆಗಾಣಿಸಿ ಪೊಲಿಯೋ ರಹಿತ ವಿಶ್ವದ ನನಸಾಗಿಸುವುದು ಇದರ ಉದ್ದೇಶ. 0-5 ವರ್ಷದ ವರೆಗಿನ ಎಲ್ಲಾ ಮಕ್ಕಳು ಜನವರಿ 31ರಂದು ತಪ್ಪದೆ ಲಸಿಕೆಯನ್ನು ಪಡೆಯಬೇಕು. ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಿಸುವುದು ಪ್ರಾಮುಖ್ಯವಾಗಿರುತ್ತದೆ ಎಂದ ಅವರು, 1995-96ರಲ್ಲಿ ಪ್ರಾರಂಭವಾದ ಪಲ್ಸ್ ಪೊಲೀಯೋ ಅಭಿಯಾನ ಅದ್ಭುತವಾಗಿ ಸಾಧನೆಯನ್ನು ಮಾಡಿದೆ. ಕರ್ನಾಟಕ ರಾಜ್ಯದಲ್ಲಿ 2007ರಲ್ಲಿ ಕೊನೆಯ ಪೊಲೀಯೋ ಪ್ರಕರಣ ಪತ್ತೆಯಾಗಿತ್ತು.ಆನಂತರ ಇಲ್ಲಿಯವರೆಗೆ ಯಾವುದೇ ಪೋಲಿಯೋ ಪ್ರಕರಣ ಪತ್ತೆಯಾಗಿಲ್ಲ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಡಾ. ರಾಜೇಶ್, ಮತ್ತು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *