Header Ads
Header Ads
Breaking News

ಜನವರಿ 6ರಿಂದ 13ರ ತನಕ ಮಂಗಲ್ಪಾಡಿ ಖಾಝಿ ಮಖಾಂ ಉರೂಸ್ 

ಮಂಜೇಶ್ವರ: ಇತಿಹಾ ಪ್ರಸಿದ್ದವಾದ ಮಂಗಲ್ಪಾಡಿ ಖಾಝಿ ಕುಂಞಿ ಆಹ್ಮದ್ ಮುಸ್ಲಿಯಾರ್ ಉಪ್ಪಾಪ ಮಖಾಂ ಉರೂಸ್ ಹಾಗೂ ಧಾರ್ಮಿಕ ಪ್ರಭಾಷಣ ಜನವರಿ 6ರಿಂದ 13ರ ತನಕ ನಡೆಯಲಿರುವುದಾಗಿ ಅಯ್ಯೂಬ್ ಹಿಂದಾದಿ ತಿಳಿಸಿದ್ದಾರೆ.

ಈ ಬಗ್ಗೆ ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನವರಿ 6ರವಿವಾರ ಸಂಜೆ 2ಗಂಟೆಗೆ ಮಖಾಂ ಝಿಯಾರತಿನೊಂದಿಗೆ ಧಾರ್ಮಿಕ ಪ್ರಭಾಷಣಕ್ಕೆ ಚಾಲನೆ ದೊರಕಲಿದೆ. ಮುಟ್ಟಮ್ ಕುಂಞಿಕೋಯ ತಂಘಲ್ ಝಿಯಾರತಿಗೆ ನೇತೃತ್ವ ನೀಡಲಿದ್ದಾರೆ. ಲಂಡನ್ ಮೊಹಮ್ಮದ್ ಹಾಜಿ ಧ್ವಜಾರೋಹಣ ಗೈಯಲಿದ್ದಾರೆ. ಕುಂಬೋಲ್ ಆಟಕೋಯ ತಂಘಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮತ ಸೌಹಾದ ವೇದಿಕೆಯನ್ನು ಎನ್.ಎ ನೆಲ್ಲಿಕುನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಚಿವ ಯು ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಹಾಜಿ, ಅಬ್ದುಲ್ಲ ಕುಂಞಿ ಫೈಝಿ, ಅಬ್ದುಲ್ ಹಮೀದ್ ತೋಟ, ಮೊಹಮ್ಮದ್ ಅನ್ಸಾರಿ ಮೊದಲಾದವರು ಹಾಜರಿದ್ದರು.

Related posts

Leave a Reply