Header Ads
Header Ads
Breaking News

ಜನಾಂಗಗಳ ನಡುವೆ ದ್ವೇಷ ಹುಟ್ಟಿಸುತ್ತಿದೆ ಕೇಂದ್ರ ಸರಕಾರ, ಕಾರ್ಮಿಕರು ಉತ್ತರಿಸಬೇಕು-ಕುಂದಾಪುರದಲ್ಲಿ ದಿಬಂಜನ್ ಚಕ್ರವರ್ತಿ


ಇಂದು ಜನಾಂಗ ವಿಂಗಡನೆ ಮಾಡುವ ಕೆಲಸ ಮಾಡುತ್ತಾ ಜಗಳ ತಂದು ಹಾಕುವ ಕೆಲಸವನ್ನು ಕಾಣದ ಕೈಗಳು ಮಾಡುತ್ತಾ ಇವೆ. ಹಿಂದು, ಮುಸ್ಲಿಂ, ಕ್ರೈಸ್ತರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಇಂದು ಮಹಿಳೆಯರ ಮೇಲೆ ಬೀದಿಗಳಲ್ಲಿ ಹಾಗೂ ಅವರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ದೌರ್ಜನ್ಯ ಹೆಚ್ಚುತ್ತಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕ ಸಂಘಟನೆಗಳು ಇಂತಹ ಘಟನೆಯನ್ನು ಖಂಡಿಸಿ ಹೋರಾಟ ಮಾಡಬೇಕಾದ ಅಗತ್ಯ ಇದೆ. ರಾಜ್ಯದ ೨೦ ಸಾವಿರ ಹಳ್ಳಿಗಳಿಗೆ, ೩೦ ಜಿಲ್ಲೆಗಳಿಗೆ ನಮ್ಮ ಕಾರ್ಮಿಕ ಸಂಘಟನೆಯನ್ನು ವಿಸ್ತರಣೆ ಮಾಡುವ ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ನವದೆಹಲಿಯ ಸಿಡಬ್ಲ್ಯುಎಫ್‌ಐ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ದಿಬಂಜನ್ ಚಕ್ರವರ್ತಿ ಹೇಳಿದರು.
ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಇವರ ಆಶ್ರಯದಲ್ಲಿ ನಡೆದ ಕಟ್ಟಡ ಕಾರ್ಮಿಕರ ಮೂರನೇ ರಾಜ್ಯ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಇಂದು ಯುವ ಜನರಲ್ಲಿ ಧಾರ್ಮಿಕವಾದ ಹಾಗೂ ಭಾವನಾತ್ಮಕವಾದ ಪ್ರಚೋದನೆಯನ್ನು ಹುಟ್ಟು ಹಾಕುವುದನ್ನು ನೋಡುತ್ತಿದ್ದೇವೆ. ನಮ್ಮ ಸಂವಿಧಾನ ದೇಶದಲ್ಲಿರುವ ಎಲ್ಲಾ ಧರ್ಮದವರ ಅವರರವರ ಆಚರಣೆಗಳನ್ನು ಹಾಗೂ ಧಾರ್ಮಿಕ ಹಕ್ಕುಗಳನ್ನು ರಕ್ಷಣೆ ಮಾಡಲು ಅವಕಾಶವನ್ನು ಕೊಟ್ಟಿದೆ ಆದರೆ ಕೇಂದ್ರ ಸರಕಾರ ಧರ್ಮದ ಹೆಸರಿನಲ್ಲಿ ಯುವಜನರನ್ನು ಹಾಗೂ ಜನರನ್ನು ಒಡೆಯುವ ಪ್ರಯತ್ನವನ್ನು ನಡೆಸುತ್ತಾ ಇದೆ. ಆದ್ದರಿಂದ ಇಂದು ಎಲ್ಲಾ ಧರ್ಮಗಳ ದುಡಿಯುವ ಜನರಿಗೆ ಒಂದು ಸವಾಲಿನ ಕೆಲಸವಾಗಿದೆ. ಇದನ್ನು ಸೈದ್ದಾಂತಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಮುಂದಿನ ದಿನದಲ್ಲಿ ಎದುರಿಸಬೇಕಾದ ಅಗತ್ಯ ಇದೆ ಎಂದರು.

ದೇಶದ ರಾಜಕೀಯ ಒಂದು ಬಲಪಂಥ ವಾದದತ್ತ ದಾಪುಗಾಲು ಹಾಕುತ್ತಿದೆ. ಆ ಬಲ ಪಂಥಕ್ಕೆ ಸವಾಲು ಹಾಕುಲು ಸಾಧ್ಯ ಇರುವುದಾದರೆ ಅದು ಎಡ ಶಕ್ತಿಗಳಿಂದ ಮಾತ್ರ ಸಾಧ್ಯ. ಇಂದು ಕರ್ನಾಟಕದಲ್ಲಿ ಎಡಪಂಥೀಯ ಶಕ್ತಿ ಕಡಿಮೆ ಇರುವ ಸಂದರ್ಭದಲ್ಲಿ ವಿವಿಧ ಸಂಘಟನೆಯ ಕಾರ್ಮಿಕರು ಒಂದಾಗಿ ಯೋಜನೆಗಳನ್ನು ರೂಪಿಸಿ ರಾಜ್ಯದ ೨೯ ಸಾವಿರ ಹಳ್ಳಿಗಳನ್ನು ಸಂಘಟನೆ ತಲುಪಲು ಸಾಧ್ಯವಾದರೆ ನಾವು ಕೂಡಾ ಕರ್ನಾಟಕದ ರಾಜಕೀಯದಲ್ಲಿ ಒಂದು ಎಡ ಚಳುವಳಿಯನ್ನು ಬಲಿಷ್ಠಗೊಳಿಸಲು ಅವಕಾಶ ಇದೆ ಎಂದರು. ಸಿಡಬ್ಲ್ಯುಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ವೀರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಡಬ್ಲ್ಯು ಎಫ್‌ಐ ರಾಷ್ಟ್ರ ಅಧ್ಯಕ್ಷ ಬಂಗಾರವೇಲು, ಕೇರಳ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಚೇರಮ್ಯಾನ್ ಸಿ.ಎ.ಜೋಸೆಫ್, ತೆಲಂಗಾಣ ರಾಜ್ಯದ ಸಿಡಬ್ಲ್ಯು ಎಫ್‌ಐ ಮುಖಂಡ ಕೊಟ್ಟಂ ರಾಜು, ಸಿಐಟಿಯು ರಾಜ್ಯ ಸಮಿತಿಯ ಕಾರ್ಯದರ್ಶಿ ಮಹಾಂತೇಶ್ ಉಪಸ್ಥಿತರಿದ್ದರು.

Related posts

Leave a Reply