Header Ads
Header Ads
Breaking News

ಜಪ್ಪಿನಮೊಗರು ಗಣೇಶೋತ್ಸವಕ್ಕೆ 10ನೇ ವರ್ಷದ ಸಂಭ್ರಮ. ಸೆ.12ರಿಂದ 14ರತನಕ ಶ್ರೀ ಗಣೇಶ ಮಂಟಪದಲ್ಲಿ ಪ್ರತಿಷ್ಠಾಪನೆ.

ಮಂಗಳೂರಿನ ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 10ನೇ ವರ್ಷದ ಗಣೇಶೋತ್ಸವ ಸೆಷ್ಟಂಬರ್ 12ರಿಂದ 14ರತನಕ ಶ್ರೀ ಗಣೇಶ ಮಂಟಪದಲ್ಲಿ ಪ್ರತಿಷ್ಠಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷರಾದ ನಾಗೇಂದ್ರ ಕುಮಾರ್ ಹೇಳಿದ್ರು. ಈ ಕುರಿತು ಮಂಗಳೂರಿನ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಗಣೇಶ್ ಶೆಟ್ಟಿ ಮತ್ತು ವನಿತಾ ಜಿ.ಶೆಟ್ಟಿ ಇವರ ಹರೆಯ ರೂಪದ ಬಂಗಾರದ ಹಾಗೂ ಬೆಳ್ಳಿಯ ಸೊಂಡಿಲ ಪಟ್ಟಿ ಮತ್ತು ಸಮಿತಿಯ ಮಹಿಳಾ ಸದಸ್ಯರಿಂದ ಬೆಳ್ಳಿಯ ಅಭಯಹಸ್ತವನ್ನು ಹರಕೆಯ ರೂಪದಲ್ಲಿ ಸಮರ್ಪಿಸಲಾಗುವುದು. ಸೆಷ್ಟಂಬರ್ ೧೨ರಂದು ಗೌರಿ ಹಬ್ಬದ ದಿನದಂದು ಗಣೇಶ ವಿಗ್ರಹವನ್ನು ಪೂರ್ವಕುಂಭ ಸ್ವಾಗತದೊಂದಿಗೆ ಗಣೇಶ ಮಂಟಪಕ್ಕೆ ತರಲಾಗುವುದು ಎಂದು ತಿಳಿಸಿದರು. ಮೂರು ದಿನಗಳ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು.

Related posts

Leave a Reply