Header Ads
Header Ads
Header Ads
Breaking News

ಜಪ್ಪಿನಮೊಗರು ಬಜಾಲ್ ನೂತನ ಕಾಂಕ್ರಿಟ್ ರಸ್ತೆಯ ಉದ್ಘಾಟನೆ

ಮುಖ್ಯಮಂತ್ರಿ ವಿಶೇಷ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ 1.5 ಕೋಟಿ ರೂಪಾಯಿಗಳ ಅನುದಾನದಿಂದ ಜಪ್ಪಿನಮೊಗರು ಬಜಾಲ್ ಮುಖ್ಯ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿದ್ದು ನೂತನ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.


ಕಾಂಕ್ರೀಟೀಕರಣಗೊಂಡ ನೂತನ ರಸ್ತೆಯನ್ನು ಶಾಸಕ ಜೆ.ಆರ್. ಲೋಬೋ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಶಿಫಾರಸ್ಸಿನ ಮೇರೆಗೆ ಈ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿ ರಸ್ತೆ ಕಾಂಕ್ರೀಟೀಕರಣಗೊಳಿಸಲಾಗಿದೆ. ಅತೀ ವೇಗವಾಗಿ ರಸ್ತೆಯ ಕಾಂಕ್ರೀಟೀಕರಣ ಕಾರ್ಯ ನಡೆದಿದೆ ಎಂದು ಹೇಳಿದರು.


ಅನಂತರ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಅವರು ಮಾತನಾಡಿ, ಜಪ್ಪಿನಮೊಗರು ಬಜಾಲ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಇದೀಗ ನೂತನವಾಗಿ ಕಾಂಕ್ರೀಟೀಕರಣಗೊಳಿಸಿದ್ದು ಇಲ್ಲಿಯ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.
ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಸುರೇಂದ್ರ, ಮತ್ತಿತ್ತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ವರದಿ: ಶರತ್

Related posts

Leave a Reply