Header Ads
Header Ads
Breaking News

ಜಪ್ಪು ಮಹಾಕಾಳಿಪಡ್ಪುವಿನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯ: ತುರವೇ, ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಜೆಪ್ಪುಮಹಾಕಾಳಿಪಡ್ಪುವಿನ ಸಮೀಪ ರೈಲ್ವೇ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಮಹಾಕಾಳಿಪಡ್ಪು ನಿರ್ಮಲ ನಗರದ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮಹಾಕಾಳಿಪಡ್ಪುವಿನ ರೈಲ್ವೇ ಗೇಟ್ ಬಳಿ ಸ್ಥಳೀಯರಯ ಧರಣಿ ನಡೆಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ವಲಯ ರೈಲ್ವೆ ಗ್ರಾಹಕರ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಅಹ್ಮದ್ ಬಾವ, ಬಜಾಲ್ ಮಹಾಕಾಳಿಪಡ್ಪುವಿನ ಸಮೀಪದ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ 1986ರಿಂದಲೇ ಹೊರಾಟಗಳು ನಡೆಯುತ್ತಿವೆ.

ಆದರೆ ಇದುವರೆಗೂ ಅದಕ್ಕೆ ಫ್ರತಿಫಲ ಸಿಕ್ಕಿಲ್ಲ. ಆದ್ದರಿಂದ ಈ ಸಮಸ್ಯೆಗೆ ಕೂಡಲೇ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳು ಮುಂದಾಗಿ ಸ್ಥಳೀಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.ಈ ಸಂದರ್ಭ ಪ್ರತಿಭಟನೆಯನ್ನು ತುರವೇ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಿರಾಜ್ ಅಡ್ಕರೆ, ಪ್ರಶಾಂತ್, ಆನಂದ್ ಆಮೀನ್ ಅಡ್ಯಾರ್, ರವಿ ಶೆಟ್ಟಿ, ಜ್ಯೋತಿಕಾ ಜೈನ್, ಆಶೋಕ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply