Header Ads
Header Ads
Header Ads
Breaking News

ಜಬರ್‌ದಸ್ತ್ ಶಂಕರ ಚಿತ್ರದ ಯಶಸ್ವಿಗೆ ಸಹಕರಿಸಿದ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದ ದೇವದಾಸ್ ಕಾಪಿಕಾಡ್‌

ಕೋಸ್ಟಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ಜಬರ್ ದಸ್ತ್ ಶಂಕರ್ ದೇಶ ವಿದೇಶಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದ ಎಲ್ಲಾ ಪ್ರೇಕ್ಷಕರಿಂದಲೂ ಶ್ಲಾಘನೆಯ ಮಹಾಪೂರವೇ ಹರಿದುಬಂದಿದೆ.ಜಬರ್ ದಸ್ತ್ ಶಂಕರ್ ಕೋಸ್ಟ್‌ವುಡ್‌ನಲ್ಲಿ ಹಾವಾ ಸೃಷ್ಠಿಸುತ್ತಿರುವ ಚಿತ್ರ. ಜಲನಿಧಿ ಫಿಲಂಸ್ ಲಾಂಛನದಲ್ಲಿ ತಯಾರಾದ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಜಬರ್‌ದಸ್ತ್ ಶಂಕರ್ ಸಿನಿಮಾ. ಈಗಾಗಲೇ ಕರಾವಳಿ ಮಾತ್ರವಲ್ಲದೆ. ದುಬಾಯಿ, ಮಸ್ಕತ್‌ನಲ್ಲೂ ಫುಲ್‌ಹೌಸ್ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿತ್ರದ ನಿರ್ಮಾಪಕ ದೇವದಾಸ್ ಜಬರ್ ದಸ್ತ್ ಶಂಕರ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಯಾರೆಲ್ಲ ಸಿನಿಮಾ ನೋಡಿಲ್ಲ ಇಂದೇ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರವನ್ನು ನೋಡಿ, ಈ ಸಿನಿಮಾ ವಿಭಿನ್ನವಾಗಿ ಮೂಡಿ ಬಂದಿದೆ. ದೇಶ ವಿದೇಶಗಳಲ್ಲೂ ಫುಲ್ ಹೌಸ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಎಲ್ಲಾ ಪ್ರೇಕ್ಷಕರಿಗೂ ದೇವದಾಸ್ ಕಾಪಿಕಾಡ್ ಅವರು ಅಭಿನಂದನೆಯನ್ನು ಸಲ್ಲಿಸಿದರು.

Related posts

Leave a Reply

Your email address will not be published. Required fields are marked *