Breaking News

ಜಮಾಲ್‌ಪುರದಲ್ಲಿ ಕಾರಿನೊಳಗೆ ಸಿಲುಕಿ ಸಾವು, ಅವಳಿ ಸಹೋದರಿಯರ ದುರಂತ ಅಂತ್ಯ

ಅತ್ಯಂತ ಹೃದಯ ವಿದ್ರಾವಕ ಹಾಗೂ ಭರಿಸಲಾಗದ ನಷ್ಟದ ದುರಂತದಲ್ಲಿ ಐದರ ಹರೆಯದ ಅವಳಿ ಜವಳಿ ಸಹೋದರಿಯರು ಎರಡು ತಾಸುಗಳಿಗೂ ಅಧಿಕ ಕಾಲ, ಲಾಕ್ ಆಗಿದ್ದ ಬಿಸಿಯೇರಿದ ಕಾರಿನೊಳಗೆ ಸಿಲುಕಿ ದಾರಣವಾಗಿ ಮೃತಪಟ್ಟಿದ್ದಾರೆ.
ತಮ್ಮ ಅಜ್ಜ ಅಜ್ಜಿಯೊಂದಿಗೆ ರಜಾ ದಿನಗಳನ್ನು ಕಳೆಯಲು ಗುರ್ಗಾಂವ್ನ ಜಮಾಲ್ಪುರ ಗ್ರಾಮಕ್ಕೆ ಈ ಅವಳಿ ಸಹೋದರಿಯರು ಬಂದಿದ್ದರು; ನಿನ್ನೆ ಈ ದುರ್ಘಟನೆ ನಡೆಯಿತು. ಲಾಕ್ ಆಗಿದ್ದ ಬಿಸಿಯೇರಿದ್ದ ಕಾರಿನೊಳಗೆ ಸುಮಾರು ಎರಡು ತಾಸು ಸಿಲುಕಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹರ್ಷಾ ಮತ್ತು ಹರ್ಷಿತಾ ಎಂಬ ಹೆಸರಿನ ಈ ಅವಳಿ ಸಹೋದರಿಯರನ್ನು ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿನ ವೈದ್ಯರು ಬಾಲಕಿಯರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಕಾರಿನೊಳಗೆ ಸಿಲುಕಿಕೊಂಡಿದ್ದ ಈ ಬಾಲಕಿಯರು ಹೊರ ಬರಲು ಕಾರಿನ ಬಾಗಿಲನ್ನು ತೆರೆಯುವ ಪ್ರಯತ್ನವನ್ನು ಮಾಡಿದ್ದರೆಂಬುದು ಅಲ್ಲಿನ ಲಕ್ಷಣಗಳಿಂದ ಕಂಡುಬರುತ್ತದೆ. ಈ ನತದೃಷ್ಟ ಬಾಲಕಿಯರ ತಂದೆ ಗೋವಿಂದ ಸಿಂಗ್ ಸೇನೆಯಲ್ಲಿದ್ದು ಮೀರತ್ನಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. ನಿನ್ನೆ ಈ ಬಾಲಕಿಯರು ತಮ್ಮ ಹೆತ್ತವರೊಂದಿಗೆ ನಗರಕ್ಕೆ ಮರಳುವವರಿದ್ದರು. ಕಾರಿನ ಲಾಕ್ ದೋಷಪೂರ್ಣವಾಗಿತ್ತು ಮತ್ತು ಲಿವರ್ ಕೆಟ್ಟು ಹೋಗಿದ್ದುದರಿಂದ ಅದರ ಕಿಟಿಕಿ ಗಾಜನ್ನು ಮೇಲೆ ಕೆಳಗೆ ಸರಿಸಲಾಗುತ್ತಿರಲಿಲ್ಲ. ಸಂಜೆ ಸುಮಾರು ೪ ಗಂಟೆಯ ಹೊತ್ತಿಗೆ ಈ ನತದೃಷ್ಟ ಬಾಲಕಿಯರು ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದುದು ಪತ್ತೆಯಾಗಿತ್ತು. ಇದಕ್ಕೆ ಮೊದಲು ಮನೆಯವರು ಬಾಲಕಿಯರಿಗಾಗಿ ಹುಡುಕಾಟ ನಡೆಸುತ್ತಿದ್ದರು.

Related posts

Leave a Reply