Header Ads
Breaking News

ಜಮೀನಿನ ದಾಖಲೆ ಪಡೆಯುವ ವೇಳೆ ಕೃಷಿಕರಿಗೆ ಅನೇಕ ಸಮಸ್ಯೆ: ಸಾಮಾಜಿಕ ಕಾರ್ಯಕರ್ತ ಹರಿಶ್ಚಂದ್ರ ಹೆಗಡೆ ಆರೋಪ

ಕಾರ್ಕಳ : ತಾಲೂಕಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಕೃಷಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೃಷಿಕರು ಕೃಷಿ ಮಾಡುತ್ತಿರುವ ಜಮೀನಿನ ಬಗ್ಗೆ 11 ಇ ನಕ್ಷೆ ಅಥವಾ ಪ್ಲಾಟಿಂಗ್ ಮಾಡುವ ಸಂದರ್ಭದಲ್ಲಿ ವರ್ಷಾನುಗಟ್ಟಲೆ ಸರ್ವೆ ಕಾರ್ಯಗಳು ನಡೆಯದೆ ಜನಸಾಮಾನ್ಯರು ಕಷ್ಟ-ನಷ್ಟ ಹೇಳತೀರದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸರ್ವೇಯರ್‍ಗಳು ಶಾಸಕರ ತಹಶೀಲ್ದಾರರು ಮಾತನ್ನು ಕೇಳದೆ ಮನಬಂದಂತೆ ವರ್ತಿಸುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಹರಿಶ್ಚಂದ್ರ ಹೆಗಡೆ ಆರೋಪಿಸಿದ್ದಾರೆ.

ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ಲಾಟಿಂಗ್ ಮಾಡುವ ಸಂದರ್ಭದಲ್ಲಿ ಆತನ ಒಂದು ಸರ್ವೇ ನಂಬರ್‍ನಲ್ಲಿ ಅನೇಕ ಸಬ್ ಡಿವಿಝನ್‍ಗಳನ್ನು ಹೊಂದಿದ್ದಲ್ಲಿ ಪ್ರತಿಯೊಂದು ಪ್ರತಿಯೊಂದು ಸಬ್‍ಡಿವಿಝನ್‍ಗಳಿಗೂ ಇತ್ತೀಚಿನ ದರಪಟ್ಟಿಯ ಪ್ರಕಾರ 1,200 ರೂ. ಪಾವತಿಸಬೇಕಾಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಕ್ಕುದೂರು ಪಂಚಾಯತ್ ಅಧ್ಯಕ್ಷರಾದ ರಾಜೇಶ್ ರಾವ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *