Header Ads
Header Ads
Breaking News

ಜಮ್ಮು-ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರದ ದಿಟ್ಟ ನಿರ್ಧಾರ ಸ್ವಾಗತಾರ್ಹ : ರಮಾಕಾಂತ್ ದೇವಾಡಿಗ ಹೇಳಿಕೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರ ಸ್ವಾಗತಾರ್ಹ. ಸರದಾರ್ ವಲ್ಲಬಾಯ್ ಪಟೇಲ್ ನಂತರದಲ್ಲಿ ದೇಶಕ್ಕಾಗಿ ದೃಢ ನಿರ್ಧಾರ ತೆಗೆದುಕೊಂಡ ಗೌರವ ಗೃಹ ಮಂತ್ರಿ ಅಮಿತ್ ಶಾ ರವರಿಗೆ ಸಲ್ಲುತ್ತೆ ಎಂಬುದಾಗಿ ಹಿಂದೂ ಸಂಘಟನೆಯ ಪ್ರಮುಖ ರಮಾಕಾಂತ್ ದೇವಾಡಿಗ ಹೇಳಿದ್ದಾರೆ. ಅವರು ಪಡುಬಿದ್ರಿಯಲ್ಲಿ ಜಮ್ಮು-ಕಾಶ್ಮೀರ ವಿಚಾರದಲ್ಲಿ 370ರ ವಿಧಿಯನ್ನು ಕಿತ್ತು ಹಾಕಿದ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ ಸಂಭ್ರಮಾಚರಣೆ ಆಚರಿಸಿದ ಸಂದರ್ಭ ಮಾತನಾಡಿದರು. ಮೋದಿ ಸರ್ಕಾರದ ಈ ಮಹತ್ತರ ನಿರ್ಧಾರ 130 ಕೋಟಿ ಭಾರತೀಯರಿಗೆ ಸಂದ ಗೌರವ ವೆಂದು ಬಣ್ಣಿಸಿದ್ದಾರೆ.

ಇದೇ ಸಂದರ್ಭ ಪಟಾಕಿ ಸಿಡಿಸಿ ಹೆದ್ದಾರಿ ಎಲ್ಲೆಡೆ ಕಸ ಚೆಲ್ಲಿದ್ದನ್ನು ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಗುಡಿಸಿ ಶುದ್ಧೀಕರಿಸುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಮುಗಿಸಿದ್ದಾರೆ. ಇದೇ ಸಂದರ್ಭ ಮೋದಿ ಸರ್ಕಾರದ ಪರ ಕಾರ್ಯಕರ್ತರು ಘೋಷಣೆಯನ್ನು ಕೂಗಿದರು. ಈ ವೇಳೆ ಪ್ರಮುಖರಾದ, ರಾಜೇಶ್ ಕೋಟ್ಯಾನ್, ಪ್ರತೀಕ್ ಕೋಟ್ಯಾನ್ ನಂದಿಕೂರು, ಸಂದೇಶ್ ಶೆಟ್ಟಿ ಮೊದಲಾದವರಿದ್ದರು

Related posts

Leave a Reply

Your email address will not be published. Required fields are marked *