Header Ads
Breaking News

ಜಯದೇವ ಟುವೀಲರ್ ಶೊರೂಂನಲ್ಲಿ ಬೆಂಕಿ ಅವಘಡ : ತಪ್ಪಿದ ಭಾರೀ ದುರಂತ

ಉಡುಪಿಯ ಇಂದ್ರಾಳಿ ರೈಲ್ವೇ ಸೇತುವೆ ಬಳಿ ಇರುವ ದ್ವಿಚಕ್ರ ವಾಹನಗಳ ಶೋರೂಮೊಂದು ಬೆಂಕಿ ಆಕಸ್ಮಿಕದಿಂದ ಸುಟ್ಟು ಕರಕಲಾಗಿದೆ. ಮೂರು ಮಹಡಿಗಳ ಕಟ್ಟಡ ಇದಾಗಿದ್ದು ಎರಡನೇ ಮಹಡಿಯಲ್ಲಿ ದ್ವಿಚಕ್ರ ವಾಹನಗಳ ಶೋರೂಂ ಇದೆ. ನಿನ್ನೆ ರಾತ್ರಿ ಈ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ಪೂರ್ತಿ ಕಟ್ಟಡವನ್ನು ವ್ಯಾಪಿಸಿಕೊಳ್ಳತೊಡಗಿದೆ. ಈ ಕಟ್ಟಡದ ಪಕ್ಕದಲ್ಲೇ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಹ ಇದ್ದು ಸ್ಥಳೀಯರಲ್ಲಿ ಭಾರೀ ಆತಂಕವನ್ನು ಉಂಟುಮಾಡಿತ್ತು. ಕೂಡಲೇ ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕೂಟ್ ಕಾರಣವಿರಬಹುದೆಂದು ಶಂಕಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಈಗಾಗಲೇ ಟೂ ವೀಲರ್ ಗಳ ಬಿಡಿ ಭಾಗಗಳು, ಕಟ್ಟಡದ ಪೀಠೋಪಕರಣಗಳು ಸಹಿತ ಅನೇಕ ಬೆಲೆ ಬಾಳುವ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟವನ್ನು ಅಂದಾಜಿಸಲಾಗಿದೆ.

Related posts

Leave a Reply

Your email address will not be published. Required fields are marked *