Header Ads
Header Ads
Breaking News

ಜಯಮಾಲಾರಿಂದ ಫಲಾನುಭವಿಗಳಿಗೆ ಹಕ್ಕು ಪತ್ರಗಳ ವಿತರಣೆ

ಕಾರ್ಕಳ ತಾಲೂಕು ಪಂಚಾಯತ್‌ನ ಮೇಜರ್ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ ಸರ್ಕಾರದ ವಿವಿಧ ಯೋಜನಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಾಗ ಅವನ್ನು ಮುಂದುವರಿಸುವ ಜವಾಬ್ದಾರಿ ಜನಪ್ರತಿನಿಧಿಗಳದ್ದಾಗಿದೆ. ಹಿಂದಿನ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಮುಂದುವರಿಸುವ ಜೊತೆಗೆ ಹೊಸ ಸರ್ಕಾರದ ಯೋಜನೆಗಳನ್ನೂ ಜನರಿಗೆ ಮುಟ್ಟಿಸುವಲ್ಲಿ ಯಾವುದೇ ರಾಜಕೀಯ ಸಲ್ಲದು. ಶಾಸಕರ ವಿನಂತಿಯಂತೆ ಕಾರ್ಕಳಕ್ಕೆ 15 ಎಕರೆ ನಿವೇಶನದಲ್ಲಿ ಬಾಲ ಭವನ ಹಾಗೂ ಮಕ್ಕಳ ಮನೋ ವಿಕಾಸಕ್ಕೆ ಬುಕ್ ಪಾರ್ಕನ್ನು ತೆರೆಯಲಾಗುವುದು. ಮಕ್ಕಳ ಮನೋಲ್ಲಾಸದ ಜೊತೆ ಮನೋವಿಕಾಸಕ್ಕೆ ಇವು ಅನುಕೂಲವಾಗಲಿವೆ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಸಹಾಯಕ ಕಮೀಶನರ್ ಭೂಬಾಲನ್, ಯೋಜನಾ ನಿರ್ದೇಶಕ ಅರುಣಾ ಪ್ರಭಾ, ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಮಿತ್ ಶೆಟ್ಟಿ ಬೈಲೂರು, ದಿವ್ಯಶ್ರೀ ಅಮೀನ್, ರೇಷ್ಮಾ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಗೋಪಾಲ ಮೂಲ್ಯ, ನಿರ್ವಹಣಾಧಿಕಾರಿ ಡಾ.ಮೇಜರ್ ಹರ್ಷ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply