Header Ads
Header Ads
Header Ads
Breaking News

ಜಯ ಕರ್ನಾಟಕ ತಾಲೂಕು ಘಟಕ, ವಲಯ ಘಟಕ ಉದ್ಘಾಟನಾ , ಪದಗ್ರಹಣ ಸಮಾರಂಭ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮ

 

ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ಜಯ ಕರ್ನಾಟಕ ತಾಲೂಕು ವಲಯ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭವು ನಡೆಯಿತು.ಇನ್ನೂ ಜಯ ಕರ್ನಾಟಕದ ಜಿಲ್ಲಾ ಪ್ರದಾನ ಸಂಚಾಲಕ ಅಣ್ಣಪ್ಪ ಕುಲಾಲ್ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವ್ರು, ಮುಂದಿನ ದಿನಗಳಲ್ಲಿ ಬೈಂದೂರಿನಲ್ಲಿ ಜಯ ಕರ್ನಾಟಕ ವತಿಯಿಂದ ಕಾರ್ಯಕರ್ತರ ಬೃಹತ್ ಸಮಾವೇಶ ಮಾಡಬೇಕು. ನೊಂದವರ ಬಾಳಿಗೆ ನಾವು ಬೆಳಕು ತೊರಿಸಬೇಕು ಇದು ನಮ್ಮ ಸಿದ್ಧಾಂತವಾಗಬೇಕೆಂದು ಎಂದು ಹೇಳಿದರು.

ಈ ವೇಳೆ ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಹಾಗೂ ಆಶ್ರಯದಾಮ ಯೂನಿಯನ್ ಅಧ್ಯಕ್ಷ ರಮೇಶ್ ಶೆಟ್ಟಿ ,ಜಯ ಕರ್ನಾಟಕ ಜಿಲ್ಲಾ ಉಪಾಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಭದ್ರ ಗಾಣಿಗ, ರಾಜ್ಯ ಸಂಚಾಲಕರ ಸತೀಶ್ ಪೂಜಾರಿ, ಗೌರವ ಸಲಹೆಗಾರ ಸುಧಾಕರ್ ರಾವ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಜಿಲ್ಲಾ ಉಪಾಧ್ಯಕ್ಷ ಶರತ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply