Header Ads
Header Ads
Breaking News

ಜಲ್ಲಿ ಮಿಕ್ಸಿಂಗ್ ಲಾರಿ ಪಲ್ಟಿ : ಲಾರಿಯಡಿ ಸಿಲುಕಿದ ಮೂವರ ರಕ್ಷಣೆ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಮಾರು ಬಾಂದೊಟ್ಟು ಎಂಬಲ್ಲಿ ಜಲ್ಲಿ ಕ್ರಶರ್ ಲಾರಿ ಪಲ್ಟಿಯಾಗಿ ಚಾಲಕ ಹಾಗೂ ಇಬ್ಬರು ಕಾರ್ಮಿಕರು ಲಾರಿಯಡಿ ಸಿಲುಕಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಕೇಮಾರು ಬಾಂದೊಟ್ಟು ಕಿರು ಸೇತುವೆ ಕಾಮಗಾರಿಗಾಗಿ ಬರುವಾಗ ಇಳಿಜಾರಿನ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿ ಬಿದ್ದಿದೆ.

ಲಾರಿ ಎದುರುಬಾಗ ಬಹುತೇಕ ಜಖಂಗೊಂಡಿದ್ದು, ಲಾರಿಯಡಿ ಸಿಲುಕಿದ ಚಾಲಕ ಹನುಮಂತ ಗದಗ, ಕಾರ್ಮಿಕರಾದ ಜಾರ್ಖಂಡ್‌ನ ಜವಹಾರಲಾಲ್ ಹಾಗೂ ಸೈಫುದ್ದೀನ್ ಅವರನ್ನು ರಕ್ಷಿಸಲಾಗಿದೆ. ಸೈಫುದ್ದೀನ್ ಸ್ಥಿತಿ ಗಂಭೀರವಾಗಿದ್ದು, ಉಳಿದಿಬ್ಬರು ಕೂಡ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Leave a Reply