Breaking News

ಜಾಂಬ್ರಿ ಗುಹೆ ಹೊಗುವುದು ಮತ್ತೊಂದು ಅಜಲು ಪದ್ಧತಿಯೇ? ಮೇ ೨೦ರಂದು ಮಂಗಳೂರಿನಲ್ಲಿ ನಡೆದ ಸಂವಾದ

 

ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಮೇ ೨೦ರ ಶನಿವಾರ ಸಂಜೆ ಡಾನ್ ಬಾಸ್ಕೋ ಮಿನಿ ಹಾಲ್‌ನಲ್ಲಿ ಜಾಂಬ್ರಿ ಮೋಂಟೆ ಪೊಗ್ಗುನು ಕುಡೊಂಜಿ ಅಜಲ ಎಂಬ ವಿಷಯವಾಗಿ ಸಂವಾದ ನಡೆಸಿತು.
ತುಧಸಂಕೇಂ ಸಂಚಾಲಕ ಪೇರೂರು ಜಾರು ಮಾತನಾಡಿ ಕೇರಳ ಕರ್ನಾಟಕ ಗಡಿಯ ಅಂದರೆ ತುಳುನಾಡಿನ ನೆಟ್ಟಣಿಗೆಯಲ್ಲಿ ಜಾಂಬ್ರಿ ಗುಹೆ ಇದೆ. ಈ ಗುಹೆ ಹೊಗ್ಗುವ ಸಂಪ್ರದಾಯವು ಭಾರತದ ಜಾತಿ ಪದ್ಧತಿಯ ಕಹಿ ಮುಖವಾಗಿದೆ, ಸಕ್ಕರೆ ಆವರಣದ ಕಹಿ ಗುಳಿಗೆ ಸಂಪ್ರದಾಯ ಈ ಗವಿಯದು. ಮುಗ್ಗೇರ್ಲು ಎನ್ನುವ ಮೊಗೇರ ಜಾತಿಯ ದಲಿತರನ್ನು ಆರಿಸಿ ಮೊದಲು ಈ ಗವಿಗೆ ಇಳಿಸಲಾಗುತ್ತದೆ. ಕಾಪಾಡರು ಎಂದರೆ ಕಾಯುವವರು ಎಂಬ ಅರ್ಥದ ಇವರು ಒಳ ಹೊಕ್ಕು ಎಲ್ಲ ಸ್ವಚ್ಚಗೊಳಿಸಿದ ಬಳಿಕ ಬ್ರಾಹ್ಮಣ ಪೂಜೆಗಾಗಿ ಒಳಕ್ಕೆ ಇಳಿಯುವುದು ಬಹಳ ಬುದ್ಧಿವಂತಿಕೆಯ ಎಚ್ಚರಿಕೆ; ಸತ್ತರೆ ದಲಿತ ಸಾಯಲಿ ಎಂಬ ಮುನ್ನೆಚ್ಚರಿಕೆ. ಈ ಕಾಪಾಡರಿಗೆ ಭಟ್ಟರು ಮೊದಲು ಬೊಜ್ಜವನ್ನೂ ಮಾಡಿರುತ್ತಾರೆ. ಇದು ಹಿಂದೂ ವೈದಿಕ ಜಾತಿ ಪದ್ಧತಿಯ ಕುಟಿಲತೆಗೆ ಒಂದು ಉದಾಹರಣೆ. ಇಲ್ಲಿ ಒಟ್ಟು ಮಾಡಿದ ಕಸಕ್ಕೂ ನಂಬಿಕೆಯ ಸುಳ್ಳು ಅರ್ಥ ನೀಡಿ ಜನಸಾಮಾನ್ಯರನ್ನು ಮೌಢ್ಯಕ್ಕೆ ದೂಡಿ ಗುಟ್ಟಲ್ಲಿ ಸುಟ್ಟು ಬಿಡುವುದನ್ನೂ ಕಾಣಬಹುದು. ದಲಿತರು ಒಳಗಿಳಿದು ಅಪಾಯವಿಲ್ಲ ಎಂದು ಹಸಿರು ಬಾವುಟ ತೋರಿಸಿದ ಮೇಲೆ ಬ್ರಾಹ್ಮಣರು ಪೂಜೆಗೆ ಗುಹೆಗೆ ಇಳಿಯುತ್ತಾರೆ. ಹಾಗಿದ್ದ ಮೇಲೆ ಇದೂ ಕೂಡ ಒಂದು ಅಜಲು ಪದ್ಧತಿಯೇ ಆಗಿದೆ. ಇದರ ಹಿಂದಿರುವುದು ಭಾರತೀಯ ಜಾತಿ ಪದ್ಧತಿಯ ಅತಿ ಕೆಟ್ಟ ಒಳ ರಾಜಕೀಯ ಎಂದು ಜಾರು ಹೇಳಿದರು.
ಕೃಷ್ಣಪ್ಪ ಬಂಬಿಲ ಮಾತನಾಡಿ ದಲಿತರು ವೈದಿಕರ ಮುಖವಾಡ ಕಳಚದವರೆಗೆ ಅವರನ್ನು ಶೋಷಣೆಯಿಂದ ಕಾಪಾಡಲು ಯಾರೂ ಬರುವುದಿಲ್ಲ ಎಂದರು. ಪ್ರಕಾಶ್ ಮಾರ್ಪಾಡಿ ಮತ್ತು ಪ್ರವೀಣ್ ಶೆಟ್ಟಿಯವರು ಜೀವಂತ ಇರುವವರಿಗೆ ಶ್ರಾದ್ಧ ಮಾಡುವ ಈ ಸಂಪ್ರದಾಯ ಮತಿಹೀನ ಮತ್ತು ಮಾನವೀಯತೆಯ ಕೊಲೆ ಎಂದರು. ವಿ. ಕೆ. ಕಡಬ, ರವಿ ಪುತ್ತೂರ, ಲಿಖಿತ್ ಮೊದಲಾದವರೂ ತಮ್ಮ ಅಭಿಪ್ರಾಯ ತಿಳಿಸಿದರು.

Related posts

Leave a Reply